ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಗಜಪಡೆಗಳ ತಾಲೀಮು ಆರಂಭವಾಗಿದ್ದು, ರಾಜಬೀದಿಗಳಲ್ಲಿ ಗಜಗಾಂಭೀರ್ಯದಿಂದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗಳುಹೆಜ್ಜೆ ಹಾಕಿದೆ.
ಅರಮನೆಯಿಂದ ಬನ್ನಿಮಂಟಪದವರೆಗೆ ದಸರಾ ಗಹಪಡೆಗಳಿಗೆ ತಾಲೀಮು ಇದ್ದು,ಪ್ರತಿ ನಿತ್ಯ ಬೆಳಗ್ಗೆ ಮತ್ತು ಸಂಜೆ ವೇಳೆ ದಸರಾ ಆನೆಗಳನ್ನು ವಾಕಿಂಗ್ ಮಾಡಿಸಲಾಗುತ್ತಿದೆ.
ನಾಡ ಹಬ್ಬಕ್ಕೆ ಸಕಲ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಇದರ ಭಾಗವಾಗಿ ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆಗಳು ಅರಮನೆಯಿಂದ ಮೈಸೂರು ರಸ್ತೆಗಳಿಗೆ ಎಂಟ್ರಿ ಕೊಟ್ಟಿವೆ.
ಅಭಿಮನ್ಯು ನೇತೃತ್ವದ ಗಜಪಡೆಗೆ ತಾಲೀಮು ಆರಂಭಿಸಲಾಯ್ತು. ಆನೆಗಳನ್ನು ಮೈಸೂರು ಅರಮನೆಯಿಂದ ಹೊರಗೆ ಕರೆದುಕೊಂಡು ಬರಲಾಯ್ತು. ಬಲರಾಮ ದ್ವಾರದ ಮೂಲಕ ಮೈಸೂರು ರಾಜಬೀದಿಗೆ ಅಭಿಮನ್ಯು ನೇತೃತ್ವದಲ್ಲಿ 8 ಆನೆಗಳು ತಾಲೀಮಿನಲ್ಲಿ ಭಾಗಿಯಾಗಿದ್ದವು.

