ಬಳ್ಳಾರಿ : ಸದ್ಯ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಮಾತಮಾಡಿದ್ದಾರೆ. ಮುಡಾ ಹಗರಣದ ಎಫೆಕ್ಟ್ ಸಿಎಂ ಸಿದ್ದರಾಮಯ್ಯ ಈಗಾಗಲೇ ಭಯದಲ್ಲಿದ್ದಾರೆ. ಈ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಕುರ್ಚಿ ಕಿತ್ತಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ಭ್ರಷ್ಟಾಚಾರ ಈಗಾಗಲೇ ಬಯಲಾಗಿದ್ದು, ಎಲ್ಲಿ ಅಧಿಕಾರ ಹೋಗುತ್ತೋ ಎಂಬ ಭಯದಲ್ಲಿದ್ದಾರೆ. ಇದೆ ಕಾರಣಕ್ಕಾಗಿ ಸಿಎಂ ತಮ್ಮ ಆಪ್ತ ಸಚಿವರ ಜೊತೆ ಡಿನ್ನರ್ ಪಾಲಿಟಿಕ್ಸ್ ಮಾಡಿದ್ದಾರೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.
ಈ ಮಧ್ಯ ಮತ್ತೊಂದು ಕಡೆಯಿಂದ ಡಿಸಿಎಂ ಡಿಕೆ ಶಿವಕುಮಾರ್ ಈಗಾಗಲೇ ಸಿದ್ದು ಕುರ್ಚಿ ಅಲುಗಾಡಿಸುತ್ತಿದ್ದಾರೆ. ಸಿದ್ದರಾಮಯ್ಯರನ್ನ ಎಳೆದು ಬಿಸಾಕಿಯಾದ್ರು ಸರಿ ಡಿಕೆ ಸಿಎಂ ಕುರ್ಚಿ ಪಡೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಆ ಮೂಲಕ ಕಾಂಗ್ರೆಸ್ ಆಂತರಿಕ ಕಿತ್ತಾಟದಿಂದ ಸದ್ಯದಲ್ಲೇ ಸರ್ಕಾರ ಪಟಮವಾಗಲಿದೆ ಎಂಬ ಅರ್ಥದಲ್ಲಿ ರೆಡ್ಡಿ ಹೇಳಿದ್ದಾರೆ.