ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪೆನ್‌ಡ್ರೈವ್ ಪ್ರಕರಣ ಕುರಿತು ಮಾತನಾಡಿದ್ದು, ಬ್ಲೂ ಫಿಲ್ಮ್ ಮಾಡುವವರ ಬಳಿಯೂ ಇಷ್ಟು ವಿಡಿಯೋ ಇರಲ್ಲ ಎಂದು ಜೆಪಿ ನಾಯಕ ಶಿವರಾಮೇಗೌಡ (Shivaramegowda) ಕಿಡಿಕಾರಿದ್ದಾರೆ.
ಎಂಪಿಯಾಗಿ ಪ್ರಜ್ವಲ್ ರೇವಣ್ಣ ಐದು ವರ್ಷ ಏನನ್ನೂ ಮಾಡಿಲ್ಲ. ಟಿಕೆಟ್ ಕೊಡಬೇಕಾದ್ರೆ ಯೋಚಿಸಬೇಕಿತ್ತು. ಕೂಡಲೇ ಪ್ರಜ್ವಲ್‌ರನ್ನ ಬಂಧಿಸುವಂತೆ ಹೇಳಿ, ಮಾಜಿ ಪ್ರಧಾನಿ ದೇವೇಗೌಡ ಕುಟುಂಬದ ವಿರುದ್ಧ ಸಿಡಿದೆದ್ದಿದ್ದಾರೆ.
ರೇವಣ್ಣ (Revanna), ಪ್ರಜ್ವಲ್ ರೇವಣ್ಣ (Prajwal Revanna) , ಭವಾನಿ ರೇವಣ್ಣ (Bhavani Revanna) ಸದ್ಯ ಕಾನೂನ ಚೌಕಟ್ಟಿನಲ್ಲಿ ಸಂಕಷ್ಟ ಎದುರಿಸುತ್ತಾರೆ. ಅದರಲ್ಲಿ ಪ್ರಜ್ವಲ್ ರೇವಣ್ಣ ಅವರ ಮೇಲೆ ಹಾಸನ ಆಶ್ಲೀಲ ವಿಡಿಯೋಗೆ ಸಂಬಂಧಿಸಿ ಕೇಸ್ ದಾಖಲಾಗಿದೆ. ಅತ್ತ ತಂದೆ ರೇವಣ್ಣ, ಹೆಂಡತಿ ಭವಾನಿ ಮೇಲೂ ಕೇಸ್ ದಾಖಲಾಗಿದೆ. ಹೀಗಾಗಿ ತಂದೆ, ಮಗನಿಗೆ ಬಂಧನದ ಭೀತಿ ಎದುರಾಗಿದೆ. ಜೊತೆಗೆ ಪ್ರಜ್ವಲ್ ಮುಂದೆ ಉಮೇಶ್ ರೆಡ್ಡಿಯೂ ನಿಲ್ ಅಂತ ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದೂ ಯುವತಿಯರು ಮನೆಯಿಂದ ಹೊರಬರುವುದೇ ಕಷ್ಟವಾಗಿದೆ: ಕೈ ವಿರುದ್ಧ ಕಮಲ ಆಕ್ರೋಶ
ಸದ್ಯ ಎಸ್‌ಐಟಿ ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸುತ್ತಿದೆ. ಅತ್ತ ಸಂತ್ರಸ್ತೆಯೂ ದೂರು ನೀಡಿದ್ದಾರೆ. ಈಹಾಗಾಗಿ ಪ್ರಕರಣದ ದಿಕ್ಕು ಬದಲಾಗಿದೆ. ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಇಂತಹ ಘಟನೆ ಮಾತ್ರ ಎಲ್ಲರನ್ನು ಅಚ್ಚರಿಗೊಳಿಸಿದೆ. ಇದನ್ನೂ ಓದಿ: ವೇದಿಕೆಯ ಮೇಲೆಯೇ ಪಾತ್ರ ಮಾಡುತ್ತಾ ಕುಸಿದು ಬಿದ್ದು ಸಾವು

