ಬೆಂಗಳೂರು: ಕೆಆರ್ ನಗರದ ಮಹಿಳೆ ಅಪಹರಣ ಆರೋಪದ ಮೆಳೆ ಪರಪ್ಪನ ಆಗ್ರಹಾರ (Parapana Agrahara) ಜೈಲು ಸೇರಿದ ಮಾಜಿ ಸಚಿವ ಹೆಚ್‌ಡಿ ರೇವಣ್ಣ (HD.Revanna) ಅವರಿಗೆ ಕಡೆಗೂ ರೀಲಿಫ್ ಸಿಕ್ಕಿದ್ದು, ಇಂದು ಅವರು ಬಿಡುಗಡೆಯಾಗಲ್ಲಿದ್ದಾರೆ.
ಸೋಮವಾರ ಬೆಳಿಗ್ಗೆಯಿಂದ ಸಣಜೆ 4 ಗಂಟೆಯವರೆಗೆ ಜಾಮೀನು ಅರ್ಜಿಯ ಸುದೀರ್ಘ ವಿಚಾರಣೆ ನಡೆಯಿತ್ತು. ನಿನ್ನೆ ಸಂಜೆ 6:30ಕ್ಕೆ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ಕೋರ್ಟ್ ರೇವಣ್ಣ ಅವರಿಗೆ ಷರತ್ತುಬದ್ಧ ಜಮೀನು ಮಂಜೂರು ಮಾಡಿದೆ. ನಿನ್ನೆ ಸಂಜೆಯಾದ ಕಾರಣ ಕೋರ್ಟ್ ಸಮಯ ಮುಗಿದಿದ್ದರಿಂದ ಷರತ್ತು ಪುರೈಸಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ಕರ್ನಾಟಕದಲ್ಲಿ ಆಪರೇಷನ್ ನಾಥ – ಸುಳಿವು ಕೊಟ್ಟ ಏಕನಾಥ ಶಿಂಧೆ!
ಮೊದಲಿಗೆ ಜನಪ್ರತಿನಿಧಿಗಳ ಕೋರ್ಟ್ನಲ್ಲಿ ಜಾಮೀನು ಪ್ರತಿ ಪಡೆಯಬೇಕು. ಆ ಬಳಿಕ ಸಿಸಿಎಚ್ 42ರಲ್ಲಿ ಷರತ್ತುಗಳ ಪೂರೈಸಲು ವ್ಯವಸ್ಥೆ ಮಾಡಲಾಗಿದೆ. ಮೊದಲಿಗೆ ಷರತ್ತು ಪೂರೈಸಲು ರೇವಣ್ಣ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ದಕ್ಷಿಣ ಭಾರತದಲ್ಲಿ ದೊಡ್ಡ ಗೆಲುವು ಸಿಗಲಿದೆ : ಅಮಿತ್ ಶಾ ಹೇಳಿದ್ದೇನು?
5 ಲಕ್ಷದ ಬಾಂಡ್, ಇಬ್ಬರು ವೈಯಕ್ತಿಕ ಶ್ಯೂರಿಟಿ ನೀಡಬೇಕು. 5 ಲಕ್ಷದ ಬಾಂಡಗೆ ಸಹಿ ಮಾಡಿಸಿ ವಕೀಲರು ಕೋರ್ಟ್ಗೆ ತಲುಪಿಸಲಿದ್ದಾರೆ. ಎಸಿಎಂಎಂ ಕೋರ್ಟ್ 42ರಲ್ಲಿ ಈ ಎಲ್ಲಾ ಜಾಮೀನಿನ ಷರತ್ತು ಪೂರೈಸಬೇಕು. ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ರೇವಣ್ಣ ಅವರು ಜೈಲಿಂದ ಬಿಡುಗಡೆಯಾಗಲಿದ್ದಾರೆ. ಇದನ್ನೂ ಓದಿ: ಜೈಪುರದ ನಾಲ್ಕು ಶಾಲೆಗಳಿಗೆ ಬಾಂಬ್ ಬೆದರಿಕೆ

