ಬೆಂಗಳೂರು, ಡಿಸೆಂಬರ್ 26:ಸತತವಾಗಿ ಏರುತ್ತಿರುವ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಹೊಸ ಮೈಲಿಗಲ್ಲು ತಲುಪಿವೆ. ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹14,000 ಗಡಿ ದಾಟಿದ್ದು, ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ ₹240 ಮಟ್ಟಕ್ಕೆ ಏರಿದೆ. ಆಭರಣ ಚಿನ್ನದ ಬೆಲೆ ಕೂಡ ₹13,000 ಗಡಿ ಸಮೀಪಕ್ಕೆ ಬಂದಿದೆ.
ನಿನ್ನೆ ಹಾಗೂ ಮೊನ್ನೆ ತಲಾ ₹30ರಷ್ಟು ಏರಿಕೆಯಾಗಿದ್ದ ಚಿನ್ನದ ಬೆಲೆ, ಇಂದು ಒಂದೇ ದಿನದಲ್ಲಿ ₹70ರಷ್ಟು ಜಿಗಿತ ಕಂಡಿದೆ. ಇದರ ಪರಿಣಾಮವಾಗಿ ದೇಶಾದ್ಯಂತ ಚಿನ್ನ–ಬೆಳ್ಳಿಯ ದರಗಳು ದಾಖಲೆಯ ಮಟ್ಟ ತಲುಪಿವೆ.
ಭಾರತದಲ್ಲಿ ಪ್ರಸ್ತುತ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,27,650 ಆಗಿದ್ದು, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹1,39,250ಕ್ಕೆ ಏರಿಕೆಯಾಗಿದೆ. 100 ಗ್ರಾಂ ಬೆಳ್ಳಿಯ ಬೆಲೆ ₹23,400 ಆಗಿದೆ. ಬೆಂಗಳೂರಿನಲ್ಲಿಯೂ ಇದೇ ದರ ಮುಂದುವರಿದಿದ್ದು, ಕೆಲವು ರಾಜ್ಯಗಳಲ್ಲಿ, ವಿಶೇಷವಾಗಿ ತಮಿಳುನಾಡು ಹಾಗೂ ಕೇರಳದಲ್ಲಿ ಬೆಳ್ಳಿ ಬೆಲೆ ₹24,500ರವರೆಗೆ ತಲುಪಿದೆ.
ಭಾರತದಲ್ಲಿನ ಚಿನ್ನ–ಬೆಳ್ಳಿ ಬೆಲೆ (ಡಿಸೆಂಬರ್ 26)
24 ಕ್ಯಾರಟ್ ಚಿನ್ನ (1 ಗ್ರಾಂ): ₹14,002
22 ಕ್ಯಾರಟ್ ಚಿನ್ನ (1 ಗ್ರಾಂ): ₹12,835
18 ಕ್ಯಾರಟ್ ಚಿನ್ನ (1 ಗ್ರಾಂ): ₹10,502
ಬೆಳ್ಳಿ (1 ಗ್ರಾಂ): ₹240
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
ಬೆಂಗಳೂರು: ₹12,835
ಚೆನ್ನೈ: ₹12,890
ಮುಂಬೈ: ₹12,835
ದೆಹಲಿ: ₹12,850
ಕೋಲ್ಕತಾ: ₹12,835
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಂ)
ಬೆಂಗಳೂರು: ₹240
ಚೆನ್ನೈ: ₹254
ಮುಂಬೈ: ₹240
ದೆಹಲಿ: ₹240

