ಮೈಸೂರು: ವಿಶ್ವ ವಿಖ್ಯಾತ ಮೈಸೂರು ಕ್ಕೆ ಸಕಲ ರಿತಿಯಲ್ಲಿ ಸಿದ್ಧತೆ ನಡೆಯುತ್ತಿದೆ. ಈ ಉತ್ಸವದ ಜಂಬೂ ಸವಾರಿಲ್ಲಿ ಭಾಗಿಯಾಗಲು ಬಂದಿರುವ ಎರಡನೇ ತಂಡದ ಗಜಪಡೆಗಳಿಗೆ ಮೈಸೂರಿನ ಸಾಯಿರಾಂ ತೂಕ ಪರೀಕ್ಷಾ ಕೇಂದ್ರದಲ್ಲಿ ತೂಕ ಪರೀಕ್ಷೆ ಇಂದು ನಡೆದಿದೆ.
2ನೇ ತಂಡದಲ್ಲಿ ಮೈಸೂರಿಗೆ ಬಂದ ಮಹೇಂದ್ರ, ಸುಗ್ರೀವ, ಪ್ರಶಾಂತ, ಲಕ್ಷ್ಮಿ, ಹಿರಣ್ಯ ಈ 5 ಆನೆಗಳ ತೂಕ ಮಾಡಲಾಗಿದೆ. ಸುಗ್ರೀವನಿಗೆ ತೂಕದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾನೆ. ಅಭಿಮನ್ಯು ನಂತರ ಅತಿ ಹೆಚ್ಚು ತೂಕವಿರುವ ಆನೆ ಸುಗ್ರೀವನಾಗಿದೆ. ಮೊದಲ ಗಜಪಡೆಯ ತಂಡದಲ್ಲಿ ಆಗಮಿಸಿರುವ ವರಲಕ್ಷ್ಮೀ ದಸರಾ ಗಜಪಡೆಯ ಕ್ಯಾಂಪ್ ನಲ್ಲಿ ಹಿರಿಯ ಆನೆ.
ನಿನ್ನೆಯಷ್ಟೇ ಕಾಡಿನಿಂದ ನಾಡಿಗೆ ಆಗಮಿಸಿದ್ದ ಐದು ಆನೆಗಳನ್ನು ಇಂದು ತೂಕ ಪರೀಕ್ಷೆ ನಡೆಸಲಾಗಿದ್ದು, ಸಂಜೆಯಿಂದ ಎರಡನೇ ಹಂತದ ಗಜಪಡೆ ತಾಲೀಮಿನಲ್ಲಿ ಭಾಗಿಯಾಗಲಿವೆ. ಅಭಿಮನ್ಯು ನೇತೃತ್ವದ 9 ಆನೆಗಳು ಆಗಸ್ಟ್ 21 ರಂದು ಗಜಪಯಣದ ಮೂಲಕ ಈಗಾಗಲೇ ಬಂದು ತಾಲೀಮು ನಡೆಸುತ್ತಿವೆ.
ಯಾವ ಆನೆ ಎಷ್ಟು ತೂಕವಿದೆ..?
ಸುಗ್ರೀವ : 5190 ಕೆಜಿ
ಪ್ರಶಾಂತ : 4875 ಕೆಜಿ
ಮಹೇಂದ್ರ: 4910 ಕೆ.ಜಿ
ಲಕ್ಷ್ಮಿ : 3485 ಕೆ.ಜಿ
ಹಿರಣ್ಯ : 2930 ಕೆಜಿ