ಬೆಂಗಳೂರು: ದೇಶದ ಮೊದಲ ಹೆಚ್.ಎಂ.ಪಿ ವೈರಸ್ ಬೆಂಗಳೂರಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು. 8 ತಿಂಗಳ ಕಂದಮ್ಮನ ದೇಹದಲ್ಲಿ ಈ ವೈರಸ್ ಪತ್ತೆಯಾಗಿದೆ. 3 ತಿಂಗಳ ಮಗುವಿಗೆ ಯಾವುದೇ ಟ್ರಾವಲ್ ಹಿಸ್ಟರಿ ಇಲ್ಲ. ಆದರೂ ವೈರಸ್ ಪತ್ತೆಯಾಗಿದೆ. ಇದಕ್ಕೂ ಮೊದಲು 8 ತಿಂಗಳ ಮಗುವಿನಲ್ಲಿ ವೈರಸ್ ಪತ್ತೆಯಾಗಿತ್ತು.
ಬೆಂಗಳೂರಿನ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಎರಡು ನವಜಾತ ಶಿಶುಗಳಲ್ಲಿ HMP ವೈರಸ್ ಕಂಡು ಬಂದಿದ್ದು. ಮೂರು ತಿಂಗಳಿನ ಮಗು ಮತ್ತು 8 ತಿಂಗಳ ಮತ್ತೊಂದು ಮಗುವಿನಲ್ಲಿ ಆರೋಗ್ಯ ಸಮಸ್ಯೆ ಕಂಡು ಬಂದಿದೆ ಎಂದು ತಿಳಿದು ಬಂದಿದೆ. ಈಗಾಗಲೇ 3 ವರ್ಷದ ಮಗು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದೆ.
ಬೆಂಗಳೂರಿನ ಮಗುವಿನಲ್ಲಿ HMP ವೈರಸ್ ಪತ್ತೆಯಾದ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ ಆಗಿದ್ದು. ಜಿಲ್ಲಾವಾರು ಮಾಹಿತಿಯನ್ನು ಪಡೆಯಲು ಮುಂದಾಗಿದೆ. ಸರ್ಕಾರಿ ಅಥವಾ ಖಾಸಗಿ ಆಸ್ಫತ್ರೆಗಳಲ್ಲಿ ವೈರಸ್ ಪತ್ತೆಯಾದ ಬಗ್ಗೆ ಎಲ್ಲಾ ಡಿಹೆಚ್‌ಓಗಳಿಂದ ಆರೋಗ್ಯ ಇಲಾಖೆ ಮಾಹಿತಿ ಕೇಳಿದೆ. ಪ್ರತಿಯೊಂದು ಡೇಟಾ ಕೂಡ ಪತ್ತೆ ಮಾಡಬೇಕು. ವೈರಸ್ ಪತ್ತೆಯಾದ್ರೆ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚುವಂತೆ ಸೂಚನೆ ನೀಡಿದೆ.
ಆತಂಕ ಬೇಡ ಎಂದ ದಿನೇಶ್ ಗುಂಡುರಾವ್ :
ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಖಚಿತತೆ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಭಾರತದಲ್ಲಿಯೆ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಈ ಪ್ರಕರಣ ಪತ್ತೆಯಾಗಿದ್ದು ಶಂಕಿತರ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಿರುವುದಾಗಿ ಹೇಳಿದರು. ಈ ವೈರಸ್ ಬಗ್ಗೆ ಹೆಚ್ಚು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಈ ವೈರೆಸ್ ಹೊಸದೇನಲ್ಲ, ಈ ವೈರಸ್ ನಿಂದ ಉಸಿರಾಟದ ತೊಂದರೆ ಸಮಸ್ಯೆ ಸಾಧ್ಯತೆ ಇದೆ. ಈ ವೈರಸ್ ಕಡಿಮೆ ಇಮ್ಯೂನಿಟಿ ಹೊಂದಿರುವ ಮಕ್ಕಳಿಗೆ ಬರುತ್ತೆ. ಇಲ್ಲಿ ಕಂಡುಬಂದಿರುವ ವೈರಸ್ಗೂ, ಚೀನಾ ವೇರಿಯಂಟ್ಗೂಐ ಸಂಬಂಧವಿಲ್ಲ. ಇದರ ಬಗ್ಗೆ ಜನರು ಆತಂಕಪಡುವ ಅವಶ್ಯಕತೆ ಇಲ್ಲ. ಎಂದು ಹೇಳಿದರು.
ಮಗುವಿನ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ‘ ಮಗುವಿಗೆ ಯಾವುದೇ ಸಮಸ್ಯೆ ಇಲ್ಲ. ಸ್ಯಾಂಪಲ್ನ್ನು ಪುಣೆ ಲ್ಯಾಬ್ಗೆ ಕಳುಹಿಸುತ್ತೇವೆ. ಇದರ ಬಗ್ಗೆ ಐಸಿಎಂಆರ್, ಕೇಂದ್ರದಿಂದ ಮಾಹಿತಿ ಪಡೆದು ಮುಂದೆ ಚರ್ಚೆ ಮಾಡ್ತೇವೆ. ಎಲ್ಲಾ ಕಡೆ ಟೆಸ್ಟ್ ಮಾಡುತ್ತೇವೆ. ಇದರ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುತ್ತೇವೆ ಎಂದು ಹೇಳಿದರು.
ಮಾರ್ಗಸೂಚಿ ಪ್ರಕಟ :
ಮೊದಲ ಪ್ರಕರಣ ಪತ್ತೆಯಾದ ಬೆನ್ನಲ್ಲೇ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತುರ್ತು ಸಭೆ ಕರೆದು ಚರ್ಚೆ ಮಾಡಿದ್ದಾರೆ. ಇದೇ ವೇಳೆ ರಾಜ್ಯದ ಜನತೆ ಏನು ಮಾಡಬೇಕು, ಏನು ಮಾಡಬಾರದು ಅನ್ನೋ ಕುರಿತು ಮಾರ್ಗೂಚಿಯನ್ನು ಪ್ರಕಟಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ದಿನೇಶ್ ಗುಂಡೂರಾವ್ ರಾಜ್ಯದ ಪ್ರಕರಣ ಕುರಿತು ಮಾತನಾಡಿದ್ದಾರೆ. ಚಳಿಗಾಲದಲ್ಲಿ ಈ ರೀತಿಯ ವೈರಸ್ ಕುರಿತು ಎಚ್ಚರಿಕೆ ಅಗತ್ಯ. ಇದು ಹೊಸದೇನಲ್ಲ. ಹಳೇ ವೈರಸ್. 2001ರಲ್ಲೇ ಈ ವೈರಸ್ ಪತ್ತೆಯಾಗಿದೆ. ಭಾರತದಲ್ಲೂ ಈ ವೈರಸ್ ಇದೆ. ಆದರೆ ಪರಿಣಾಕಾರಿಯಾಗಿಲ್ಲ. ಕೇವಲ ಶೇಕಡಾ 1 ರಷ್ಟು ಮಾತ್ರ ತೀವ್ರತೆ ಇದೆ ಅನ್ನೋ ಮಾಹಿತಿ ಇದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಇಮ್ಯುನಿಟಿ ಕಡಿಮೆ ಇರುವ ಮಕ್ಕಳಿಗೆ ಬೇಗನೆ ಈ ವೈರಸ್ ದಾಳಿ ಮಾಡಲಿದೆ. ಮಕ್ಕಳು ಹಾಗೂ ಹಿರಿಯರು ತೀವ್ರ ಮುಂಜಾಗ್ರತೆ ವಹಿಸಬೇಕು. ಐಸಿಎಂಆರ್, ಕೇಂದ್ರದಿಂದ ಮಾಹಿತಿ ಪಡೆದು ಮುಂದೆ ಚರ್ಚೆ ಮಾಡ್ತೇವೆ, ಸದ್ಯ ರಾಜ್ಯದ ಪ್ರಕರಣದ ಸ್ಯಾಂಪಲ್ ಪುಣೆಗೆ ಕಳುಹಿಸುವ ಕುರಿತು ಚರ್ಚಿಸುತ್ತೇವೆ ಎಂದು ದಿನೇಶ್ ಗಂಡೂರಾವ್ ಹೇಳಿದ್ದಾರೆ. ಇದೇ ವೇಳೆ ಮಾರ್ಗಸೂಚಿ ಪ್ರಕಟಿಸಲಾಗಿದೆ ಎಂದಿದ್ದಾರೆ.
ಏನು ಮಾಡಬೇಕು
*ನೆಗಡಿ, ಕೆಮ್ಮು, ಶೀತದ ಸಂದರ್ಭದಲ್ಲಿ ಕರ್ಚೀಫ್, ಟಿಶ್ಯೂ ಪೇಪರ್ ಬಳಸಿ, ಕೆಮ್ಮುವಾಗ ಮೂಗು, ಬಾಯಿ ಮುಚ್ಚಿಕೊಳ್ಳಿ
*ನಿಮ್ಮ ಕೈಗಳನ್ನು ಸೋಪ್‌ನಿಂದ ಶುಚಿಯಾಗಿ ತೊಳೆಯಿರಿ, ಅಥವಾ ಸ್ಯಾನಿಟೈಸರ್ ಬಳಸಿ
*ಜನಸಂದಣಿ ಪ್ರದೇಶಗಳಿಂದ ದೂರವಿರಿ
*ಜ್ವರ, ಶೀತ, ಕೆಮ್ಮು ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದ ಜನರ ಸಂಪರ್ಕದಿಂದ ದೂರವಿರಿ
*ಮುಚ್ಚಿದ ಕೋಣೆಗಳಿಂದ ತೆರೆದ, ಗಾಳಿ, ಬೆಳಕುವ ಇರುವ ಕೊಠಡಿಗಳಲ್ಲಿರಿ
*ಆರೋಗ್ಯ ಸಮಸ್ಸೆಗಳಿದ್ದರೆ ಮನೆಯಲ್ಲೇ ಇರಿ, ಜನರ ಸಂಪರ್ಕ ಮಾಡಬೇಡಿ
*ಚೆನ್ನಾಗಿ ನೀರು ಹಾಗೂ ಪೌಷ್ಠಿಕ ಆಹಾರ ಸೇವಿಸಿ
ಏನು ಮಾಡಬಾರದು?
*ಬಳಸಿದ ಖರ್ಚೀಫ್, ಟಿಶ್ಯೂ ಪೇಪರ್ ಬಳಸಬೇಡಿ
*ಶೀತ, ಜ್ವರ, ಕೆಮ್ಮು ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಇದ್ದವರ ಜೊತೆ ಸಂಪರ್ಕ ಮಾಡಬೇಡಿ, ಟವೆಲ್ ಸೇರಿದಂತೆ ಇತರ ವಸ್ತುಗಳನ್ನು ಹಂಚಿಕೊಳ್ಳಬೇಡಿ
*ಮೂಗು, ಬಾಯಿ, ಕಣ್ಣುಗಳನ್ನು ಕೈಗಳಿಂದ ಪದೇ ಪದೇ ಮುಟ್ಟಬೇಡಿ
*ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳಬೇಡಿ
*ವೈದ್ಯರ ಭೇಟಿ ಮಾಡದೆ ಔಷಧಿಗಳನ್ನು ತೆಗೆದುಕೊಳ್ಳಬೇಡಿ

