ಬೆಂಗಳೂರಿನ ನೆಲಮಂಗಲದ ಅರೆಬೊಮ್ಮನಹಳ್ಳಿಯಲ್ಲಿರುವ ಶ್ರೀ ಶಿವಕೃಪಾನಂದ ಸ್ವಾಮಿ ಮಠದಲ್ಲಿ ಕಳೆದ ಭಾನುವಾರ ಧ್ಯಾನ ಮತ್ತು ಯೋಗ ಮಂದಿರದ ಕಟ್ಟಡಕ್ಕೆ ಶಿಲಾ ಸ್ಥಾಪನೆಯನ್ನ ನೆರವೇರಿಸಲಾಯಿತು.
ಮಠದ ಸಮಿತಿಯ ಪ್ರಮುಖರಾದ ಶ್ರೀಧರಮಣಿ, ಅರುಣ್‌ಕುಮಾರ್, ಶಾಂತರಾಜು, ಜ್ಯೋತಿ, ಇಂಧುಮತಿ ಅವರುಗಳು ಸೇರಿದಂತೆ ಇತರೆ ಎಲ್ಲಾ ಪದಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು. ಸಮಿತಿಯ ಪದಾಧಿಕಾರಿಗಳು ಆರಂಭದಲ್ಲಿ ಗುರುವಂದನೆ ಸಲ್ಲಿಸಿ, ಶಿಲೆಯ ಮೇಲೆ ಜೈಬಾಬಾ ಸ್ವಾಮಿ ಎಂದು ಬರೆಯುವ ಮೂಲಕ ಪೂಜೆ ಸಲ್ಲಿಸಿದರು. ಬಳಿಕ ಮಠದಲ್ಲಿದ್ದ ಎಲ್ಲಾ ಸಾಧಕರು ಸಹ ಇದೇ ಕಾರ್ಯಕ್ರಮವನ್ನ ಮುಂದುವರೆಸಿದರು.
ಈ ಕಾರ್ಯಕ್ರಮಕ್ಕೂ ಮುನ್ನ ಎಲ್ಲಾ ಸಾಧಕರು ಎಂದಿನಂತೆ ಧ್ಯಾನ ಮುಗಿಸಿದ ಬಳಿಕ ಶಿಲಾ ಪೂಜೆಯಲ್ಲಿ ಭಾಗವಹಿಸಿದ್ದರು. ಸುಮಾರು ೧೮ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಧ್ಯಾನ ಹಾಗೂ ಯೋಗ ಮಂದಿರವೂ ಇಡೀ ದಕ್ಷಿಣ ಭಾರತಕ್ಕೆ ಸೀಮಿತವಾಗಿರುವಂತೆ ನಿರ್ಮಿಸಲಾಗುತ್ತಿದ್ದು, ಸದ್ಯಕ್ಕೆ ಈ ಮಂದಿರಕ್ಕೆ ಸಾಧಕರೇ ತಮ್ಮ ಕೈಲಾದ ಹಣ ಸಹಾಯ ಮಾಡುವ ಮೂಲಕ ಕಾಮಗಾರಿ ನಡೆಸಲಾಗುತ್ತಿದೆ ಎಂದು ಮಠದ ಪ್ರಮುಖರು ತಿಳಿಸಿದ್ದಾರೆ.

