ನವದೆಹಲಿ: ದೆಹಲಿ ಮದ್ಯನೀತಿ ಹಗರಣದಲ್ಲಿ ಬಂಧನೆಕ್ಕೊಳಗಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Aravind kejriwal) ಹಾಗೂ ಬಿಆರ್‌ಎಸ್ ನಾಯಕಿ ಕೆ ಕವಿತಾ (Kavitha) ನಅವರ ನ್ಯಾಯಂಗ ಬಂಧನವನ್ನು ದೆಹಲಿ ನ್ಯಾಯಾಲಯ (Delhi Court) ಮೇ 7 ರವರೆಗೆ ವಿಸ್ತರಿಸಿದೆ.
ಈ ಹಿಂದೆ ನ್ಯಾಯಾಲಯವು ಕೇಜ್ರಿವಾಲ್ ಅವರನ್ನು ಏಪ್ರಿಲ್ 1 ರಿಂದ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ನಂತರ ನ್ಯಾಯಾಲಯ ಮತ್ತೊಮ್ಮೆ ಅವರ ನ್ಯಾಯಾಂಗ ಬಂಧವನ್ನು ಏಪ್ರಿಲ್ 23 ರವರೆಗೆ ವಿಸತರಿಸಿತ್ತು. ಇದನ್ನೂ ಓದಿ: ವಿಧಾನಸೌಧದ ಆವರಣದಲ್ಲಿ ಕೈ ನಾಯಕರ ಪ್ರತಿಭಟನೆ: ಸಿದ್ದರಾಮಯ್ಯ, ಡಿಕೆಶಿ, ಸುರ್ಜೇವಲ ವಿರುದ್ಧ ಬಿಜೆಪಿ ದುರು
ಈ ಪ್ರಕರಣದಲ್ಲಿ ಸಿಎಂ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಇಡಿ ಬಂಧಿಸಿತ್ತು. ಇದೀಗ ಮೇ 7ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ. ಹಾಗೆಯೇ ಬಿಆರ್ ಎಸ್ ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನೂ ಕೂಡ ವಿಸ್ತರಿಸಲಾಗಿದೆ. ಇದನ್ನೂ ಓದಿ: ವಿಜಯ್ ಜೊತೆ ರಾಜಕೀಯಕ್ಕೆ ಬರೋಕೆ ಸಜ್ಜಾದ ವಿಶಾಲ್
ದೆಹಲಿ ಸರ್ಕಾರದ ಹೊಸ ಅಬಕಾರಿ ನೀತಿಯ ಅಕ್ರಮದಲ್ಲಿ ಸಿಎಂ ಆಗಿ ಅರವಿಂದ್ ಕೇಜ್ರಿವಾಲ್ ಪಾತ್ರ ಗುರುತರವಾಗಿದೆ ಎನ್ನುವುದಕ್ಕೆ, ಮತ್ತು ಅಕ್ರಮದಿಂದ ಬಂದ ಲಾಭವನ್ನು ಮರೆಮಾಚುವ ಪ್ರಯತ್ನ ಮಾಡಿದ್ದರು ಎನ್ನುವುದಕ್ಕೆ ಇಡಿ ಬಲವಾದ ದಾಖಲೆಗಳನ್ನು ಹೊಂದಿದೆ. ಈ ಪ್ರಕರಣದಲ್ಲಿ ಕೇಜ್ರಿವಾಲ್ ಅವರು ವೈಯಕ್ತಿಕವಾಗಿಯೂ ಮತ್ತು ಎಎಪಿ ಪಕ್ಷದ ಸಂಚಾಲಕರಾಗಿಯೂ ಭಾಗಿಯಾಗಿದ್ದರು ಎಂಬುದು ತಿಳಿದುಬರುತ್ತದೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಇದನ್ನೂ ಓದಿ: ನೇಹಾ ಹಿರೇಮಠ ತಂದೆ ಬಳಿ Very Sorry ಎಂದ ಸಿಎಂ

