ಕೋಲಾರ: ಹೆಣ್ಣು ಮಗುವೆಂದು(Girl Baby) ಭಾವಿಸಿ, ಮಾತ್ರೆ( Tablets) ಸೇವಿಸಿ ಗಂಡು ಮಗುವಿನ ಗರ್ಭಪಾತವಾದ ಘಟನೆ ಕೋಲಾರ (Kolar) ಜಿಲ್ಲೆಯ ಮಾಲೂರಿನಲ್ಲಿ(Malur) ನಡೆದಿದೆ.
ಕೆಜಿಎಫ್ (KGF) ತಾಲೂಕಿನ ಆಡಂಪಲ್ಲಿ ನಿವಾಸಿ ಮುರುಗೇಶ್ ಹಾಗೂ ಅನಿತಾ ದಂಪತಿಯ 3 ತಿಂಗಳ ಮಗು ಮೃತಪಟ್ಟಿದೆ. ದಂಪತಿ ಕಳೆದ ಸೋಮವಾರ ಮಾಲೂರು ನಗರದ ಸಂಜನಾ ಖಾಸಗಿ ಆಸ್ಪತ್ರೆಗೆ ಸ್ಕ್ಯಾನಿಂಗ್ಗೆಂದು ಹೋಗಿದ್ದಾರೆ. ಅವರಿಗೆ ಈ ಹಿಂದೆ 2 ಹೆಣ್ಣುಮಕ್ಕಳಿದ್ದು, ಮೂರನೇಯದ್ದು ಗಂಡು ಮಗುವಾಗಲಿ ಎಂದು ದಂಪತಿ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಈ ವೇಳೆ ವೈದ್ಯರು ಹೊಟ್ಟೆಯಲ್ಲಿರುವ ಹೆಣ್ಣು ಮಗುವನ್ನು ಗಂಡಾಗಿ ಪರಿವರ್ತನೆ ಮಾಡಿಸುವುದಾಗಿ ಮಾತ್ರೆಗಳನ್ನು ಕೊಟ್ಟಿದ್ದಾರೆ ಎಂದು ಈಗ ಪೋಷಕರು ಆರೋಪ ಮಾಡುತ್ತಿದ್ದಾರೆ. ಜೊತೆಗೆ ಹೆಣ್ಣು ಮಗುವೆಂದು ಸುಳ್ಳು ಹೇಳಿ ಸುಮಾರು 25 ಸಾವಿರ ರೂಪಾಯಿ ಹಣ ಪಡೆದಿದ್ದಾರೆಂದು ಮುರುಗೇಶ್ ಆರೋಪ ಮಾಡಿದ್ದಾರೆ. ಇತ್ತ ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರು, ನಾವು ಗರ್ಭಪಾತಕ್ಕೆ ಮಾತ್ರೆ ಕೊಟ್ಟೆ ಇಲ್ಲ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ:ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಬಂಧನ
ಆಸ್ಪತ್ರೆಯಲ್ಲಿ ಭ್ರೂಣ ಲಿಂಗದ ಸ್ಕ್ಯಾನಿಂಗ್ ಮಾಡಿಸಿ ಸಾವಿರಾರು ಹಣ ಪೀಕುತ್ತಿರುವ ಆರೋಪ ಕೂಡ ಕೇಳಿಬಂದಿದೆ. ಹೀಗಾಗಿ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಾಲೂರು ತಾಲೂಕು ವೈದ್ಯಾದಿಕಾರಿಗೆ ಮುರುಗೇಶ್ ದೂರು ನೀಡಿದ್ದಾರೆ. ಈ ಬೆನ್ನಲ್ಲೇ ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಲಾಗಿದೆ. ಡಿಹೆಚ್ಓ ಜಗದೀಶ್ ನೇತೃತ್ವದಲ್ಲಿ ಮಾಲೂರು ಪಟ್ಟಣದ ಸಂಜನಾ ಆಸ್ಪತ್ರೆ ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಲಾಗಿದೆ. ಇದನ್ನೂ ಓದಿ:ಉತ್ತರಪ್ರದೇಶದಲ್ಲಿ ಒಂದೇ ಕುಟುಂಬದ 5 ಮಂದಿಯ ಕೊಲೆ- ತನ್ನವರನ್ನ ಕೊಂದು ತಾನು ಸತ್ತ
ಘಟನೆ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹನುಮಾನ್ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕೇಜ್ರಿವಾಲ್!