ಲಕ್ನೋ: ತಾಯಿಗೆ (Mother) ಗುಂಡಿಟ್ಟು, ಹೆಂಡತಿಗೆ (Wife) ಸುತ್ತಿಗೆಯಿಂದ ಹೊಡೆದು ಕೊಂದು ಮತ್ತು ಮೂವರು ಮಕ್ಕಳನ್ನ ಟೆರಸ್‌ನಿಂದ ಎಸೆದು ಕೊಲೆ ಮಾಡಿರುವ ಘಟನೆ ಸೀತಾಪುರದಲ್ಲಿ (Seethapur) ನಡೆದಿದೆ.
ತಾಯಿ ಸಾವಿತ್ರಿ ದೇವಿ (62), ಪತ್ನಿ ವೀರೇಂದ್ರ ಸಿಂಗ್ (40), ಪುತ್ರಿ ಅಶ್ವಿ (12), ಪುತ್ರಿ ಅರ್ನಿ (8), ಅದ್ವಿಕ್ (4) ಹತ್ಯೆಯಾದವರು. ಅನುರಾಗ್ ಸಿಂಗ್ (45) ಕೊಲೆ ಮಾಡಿದ ಆರೋಪಿ.
ಮೊದಲಿಗೆ ತಾಯಿ ಮೆಲೆ ಗುಂಡು ಹಾರಿಸಿ ಕೊಲೆಗೈದರೆ, ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕ್ರೂರವಾಗಿ ಕೊಲೆ ಮಾಡಿದ್ದಾನೆ. ಆರೋಪಿ ಇಲ್ಲಿಗೆ ನಿಲಿಸಿದ್ದರೆ ಚೆನ್ನಾಗೆ ಇರುತ್ತಿತ್ತು. ಆದರೆ ಆತನ ಕಠೋರ ಹೃದಯ ಮಕ್ಕಳಿಗೂ ಮಿಡಿಯಲಿಲ್ಲ.ಇದನ್ನೂ ಓದಿ: SSLC ವಿದ್ಯಾರ್ಥಿ ಕೊಲೆ ಪ್ರಕರಣ; ಕೊನೆಗೂ ರುಂಡ ಪತ್ತೆ
ತಾಯಿ ಮತ್ತು ಹೆಂಡತಿಯನ್ನ ಕೊಲೆ ಮಾಡಿದ ಬಳಿಕ ಪುಟ್ಟ ಮಕ್ಕಳನ್ನು ಟೆರೆಸ್ ಮೇಲಿಂದ ಎಸೆದಿದ್ದಾನೆ. ಟೆರೆಸ್‌ನಿಂದ ಮಕ್ಕಳು ಬೀದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಪ್ರಾಣಬಿಟ್ಟಿದ್ದಾರೆ. ಬಳಿಕ ಆರೋಪಿ ತಾನೂ ಕುಡ ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಕ್ರಿಕೆಟ್ ಬ್ಯಾನರ್ ಕಟ್ಟುವಗ ದುರಂತ- ಓರ್ವ ಸಾವು, ಮುಗಿಲು ಮುಟ್ಟಿದ ಆಕ್ರಂದನ
ಮಥುರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದ್ದು, ಪೊಲೀಸ್ ಅಧಿಕಾರಿಗಳ ಪ್ರಾಥಮಿಕ ವರದಿ ಪ್ರಕಾರ, ಆತ ಮದ್ಯ ವ್ಯಸನಿ ಹಾಗೂ ಮಾನಸಿಕ ಅಸ್ವಸ್ಥ ಕೂಡ ಆಗಿದ್ದ ಎಂದು ತಿಳಿದುಬಂದಿದೆ.ಇದನ್ನೂ ಓದಿ:SSLC ವಿದ್ಯಾರ್ಥಿನಿ ಭೀಕರ ಹತ್ಯೆ ಮಾಡಿದ್ದ ಆರೋಪಿ ಅರೆಸ್ಟ್ – ಇನ್ನೂ ಪತ್ತೆಯಾಗದ ರುಂಡ

