Bomb Threat : ಬೀದರ್ ನಗರದ ಗುರುದ್ವಾರ ಅಮೃತ ಕುಂಡ ಯಾತ್ರಿಕ ನಿವಾಸದಲ್ಲಿ ಸ್ಫೋಟ ಆಗುತ್ತೆಂದು ಕಿಡಿಗೇಡಿಗಳಿಂದ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ.
ಅಮೃತ ಕುಂಡ ಯಾತ್ರಿಕ ನಿವಾಸದಲ್ಲಿ ಸ್ಫೋಟ ಆಗುತ್ತದೆ ಎಂದು ವಕೀಲ ಅಲೀಂ ಅಲ್ ಬುಕಾರಿ ಎಂಬ ವ್ಯಕ್ತಿಯಿಂದ ಗುರುದ್ವಾರಕ್ಕೆ ಬೆದರಿಕೆ ಇ-ಮೇಲ್ ಕಳುಹಿಸಲಾಗಿದೆ. ಮೇಲ್ ಬಂದಿರುವ ಕುರಿತು ಪೊಲೀಸ್ ಇಲಾಖೆಗೆ ಗುರುದ್ವಾರ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಸುದ್ದಿ ತಿಳಿಯುತ್ತಿದ್ದಂತೆ ನಿನ್ನೆ ಗುರುದ್ವಾರದಲ್ಲಿ ಎಸ್ಪಿ, ಡಿವೈಎಸ್ಪಿ, ಸರ್ಕಲ್ ಇನ್ಸ್‌ಪೆಕ್ಟರ್ ಸೇರಿ 30ಕ್ಕೂ ಹೆಚ್ಚು ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಡಾಗ್ ಸ್ಕಾಡ್ ಸೇರಿ ವಿಶೇಷ ತಂಡದಿಂದ ಪರಿಶೀಲನೆ ಮಾಡಲಾಗಿದ್ದು, ಯಾವುದೇ ರೀತಿ ಸ್ಫೋಟಕ ಪದಾರ್ಥಗಳು ಪತ್ತೆಯಾಗಿಲ್ಲ.
ತಮಿಳುನಾಡಿನ ಡ್ರಗ್ಸ್ ಸ್ಮಗ್ಲರ್ ಜಾಫರ್ ಸಾದಿಕ್ ಕೃತಿಗಾ ಉದಯನಿಧಿ ಹೆಸರನ್ನು ಬಾಂಬ್ ಬೆದರಿಕೆ ಇ-ಮೇಲ್ನಲ್ಲಿ ಉಲ್ಲೇಖಿಸಲಾಗಿದೆ. ನಿವೇತಾ ಪೇತುರಾಜ್- ಉದಯನಿಧಿ ಪ್ರಕರಣಗಳು ಬೇರೇಡೆ ಸೆಳೆಯಲು ಸ್ಫೋಟಿಸಲಾಗುತ್ತಿದೆ. ಪಾಕ್ನ ಐಎಸ್ಐ ಸೆಲ್ಸ್ಗಳು ಬಾಂಬ್ ಸ್ಫೋಟದ ಸಂಚು ರೂಪಿಸಿವೆ. ಭಕ್ತರ ಮೈಕ್ರೋ ಮೊಬೈಲ್ ಫೋನ್ ಸಿಗ್ನಲ್ ಬಳಸಿ ಸ್ಫೋಟಗೊಳಿಸಲಿದ್ದಾರೆಂದು ಉಲ್ಲೇಖಿಸಲಾಗಿದೆ.
ಕಳೆದ ಕೆಲ ತಿಂಗಳಿಂದ ಕರ್ನಾಟಕದ ಹಲವೆಡೆ ಕಿಡಿಗೇಡಿಗಳಿಂದ ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ಗಳು ಬಂದಿವೆ. ನಿನ್ನೆ (ಶುಕ್ರವಾರ)ದಂದು ಬೆಂಗಳೂರಿನ ಸುಮಾರು 40 ಶಾಲೆಗಳಿಗೆ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿತ್ತು.
- ಅಮೆರಿಕಾ-ಇರಾನ್ ಮಾತುಕತೆ : ಇರಾನ್ ಇಂಧನ ತಾಣಗಳ ಮೇಲಿನ ದಾಳಿ ಮುಂದೂಡಿದ ಟ್ರಂಪ್
- ದಾವಣಗೆರೆ ದಕ್ಷಿಣ ಕ್ಷೇತ್ರ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಮರ್ಥ ಶಾಮನೂರು
- ಬಾಗಲಕೋಟೆ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ನಾಮಪತ್ರ ಸಲ್ಲಿಕೆ
- ಪಶ್ಚಿಮ ಏಷ್ಯಾ ಉದ್ವಿಗ್ನತೆ ನಡುವೆಯೂ ಇಂಧನದ ದೃಷ್ಟಿಯಿಂದ ಭಾರತ ಸುರಕ್ಷಿತವಾಗಿದೆ : ಪ್ರಧಾನಿ ಮೋದಿ
- ವಾಣಿಜ್ಯ ಸಿಲಿಂಡರ್ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್ ಉದ್ಯಮಕ್ಕೆ ಕೊನೆಗೂ ರಿಲೀಫ್

