ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಬೆನ್ನಲ್ಲೇ ಇದೀಗ ಕದಂಬ ಹೋಟೆಲ್‌ಗೆ ಬಾಂಬ್ ಬೆದರಿಕೆ ಹಾಕಿರುವ ಪತ್ರವೊಂದು ದೊರೆತಿದೆ.
ಹೆಚ್.ಎಂ.ಟಿ ಗ್ರೌಂಡ್ ಬಳಿ ಇರುವ ಕದಂಬ ಹೋಟೆಲ್‌ನಲ್ಲಿ ಬಆಂಬ್ ಇಟ್ಟಿರುವುದಾಗಿ ಜಾಲಹಳ್ಳಿ ಪೊಲೀಸ್ ಸ್ಟೇಷನ್‌ಗೆ ಅನಾಮಧೇಯ ಪತ್ರ ಬಂದಿದೆ. ಕೂಡಲೆ ಜಾಲಹಳ್ಳಿ ಪೊಲೀಸರು ಸ್ಥಲಕ್ಕೆ ದೌಡಾಯಿಸಿ ಬಾಂಬ್ ಸ್ವ್ಕಾಡ್, ಶ್ವಾನ ದಳಗಳಿಂದ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: 2016 ರ ಶಿಕ್ಷಕರ ಹಗರಣಕ್ಕೆ ಬಿಗ್ ಟ್ವಿಸ್ಟ್ -ಕೆಲಸ ಕಳೆದುಕೊಂಡ 25,000 ಶಿಕ್ಷಕರು

ಈ ಪತ್ರ ಪೋಸ್ಟ್ ಆಫೀಸ್ ಮೂಲಕ ಬಂದಿದ್ದು, ಅರ್ಧ ಗಂಟೆ ಮುಂಚಿತವಾಗಿ ಜಾಲಹಳ್ಳಿ ಪೊಲೀಸರು ಸ್ವೀಕರಿಸಿದ್ದರು. ಪತ್ರವು ಒಂದು ಪೇಜ್ ಇದ್ದು, ಈ ಸಂಬಂಧ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ಬಯಲಾಗಿದೆ. ಇದನ್ನೂ ಓದಿ: ಲೋಕಸಭಾ ಚುನಾವಣಾ ಅಖಾಡದಿಂದ ದಿಂಗಾಲೇಶ್ವರ ಶ್ರೀ ಹಿಂದಕ್ಕೆ
ಎಲ್ಲ ಪರಿಶೀಲನೆ ಮಾಡಲಾಗಿದೆ. ಯಾವುದೇ ರೀತಿಯ ಸ್ಫೋಟಕ ವಸ್ತುಗಳು ಇರೋದು ಪತ್ತೆ ಆಗಿಲ್ಲ. ಎಲ್ಲಾ ಪರಿಶೀಲನೆ ಮಾಡಲಾಗಿದ್ದು ಮತ್ತೊಮ್ಮೆ ಬಾಂಬ್ ಸ್ಕ್ವಾಡ್ ತಂಡದಿಂದ ಪರಿಶೀಲನೆ ಮಾಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಪ್ರೇಯಸಿ ಮದುವೆ ದಿನವೇ ಯುವಕನ ಸಾವು : ತಲೆ ತುಂಡರಿಸಿದ್ದ ಶವ ಪತ್ತೆ
ಪತ್ರದಲ್ಲಿ ಏನಿದೆ..?:ಅವಾಚ್ಯ ಶಬ್ಧಗಳಿಂದ ನಿಂದಿಸಿ ಪೊಲೀಸರಿಗೆ ಬೈದಿರುವ ಅನಾಮಿಕ ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ಮಾಡಿದ್ದು ನಾನೇ. ಈಗ ಈ ಹೊಟೇಲ್‌ನಲ್ಲಿ ಬಾಂಬ್ ಇಟ್ಟಿರುವುದು ಕೂಡ ನಾನೇ ಎಂದು ಹೇಳಿದ್ದಾನೆ. ಇದನ್ನೂ ಓದಿ: ನೇಹಾ ಹತ್ಯೆ ಖಂಡಿಸಿ ರಾಜ್ಯದ್ಯಂತ ಬಿಜೆಪಿ ಪ್ರತಿಭಟನೆ
ಬೆಚ್ಚಿ ಬಿದ್ದ ಜನ:ಕದಂಬ ಹೋಟೆನಲ್ಲಿ ಸೀಮಂತ ಕಾರ್ಯಕ್ರಮ ನಡೆಯುತ್ತಿತ್ತು. ಇದೇ ವೇಳೆ ಏಕಾಏಕಿ ಶ್ವಾನದಳದೊಂದಿಗೆ ಎಂಟ್ರಿ ಕೊಟ್ಟ ಪೊಲೀಸರು ಬಾಂಬ್ ಇದೆ ಎಂದು ಹೇಳಿದ್ದಾರೆ. ಇದರಿಂದ ಭಯಭೀತರಾದ ಜನ ಹೋಟೆಲ್‌ನಿಂದ ಹೊರಕ್ಕೆ ಓಡಿ ಬಂದಿದ್ದಾರೆ. ಇದನ್ನೂ ಓದಿ: ನೇಹಾ ಕೋಲೆ ಕೇಸ್ ಸಿಐಡಿ ತನಿಖೆಗೆ ವಹಿಸುತೇವೆ: ಸಿಎಂ

