ಬೆಂಗಳೂರು: ಮಾಜಿ ಸಚಿವ ಹೆಚ್.ಡಿ ರೇವಣ್ಣ (HD.Revanna) ಪರಪ್ಪನ ಅಗ್ರಹಾರ (Parappna Agrahara) ಜೈಲಿನಿಂದ (Jail) ಬಿಡುಗಡೆಯಾಗಿದ್ದಾರೆ. ಅವರು ಬಿಡುಗಡೆಯಾಗುತ್ತಿದ್ದಂತೆ ಅವರ ಅಭಿಮಾನಿಗಳು ಜಯ ಘೋಷನೆ ಹಾಕಿ ಸಂಭ್ರಮಿಸಿದರು. ಕಾರಾಗೃಹದ ಮುಂದೆ ಸೇರಿದ್ದ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಚದುರಿಸಲು ಪೊಲೀಸರು (Police ) ಲಾಠಿಚಾರ್ಜ್ ಮಾಡಿದ್ದಾರೆ.
ಕೆಆರ್ ನಗರದ ಮಹಿಳೆ ಅಪಹರಣ ಪ್ರಕರಣದಲ್ಲಿ ಜೈಲು ಸೇರಿದ್ದ ರೇವಣ್ಣ ಅವರಿಗೆ ಇಂದು ಜೈಲುವಾಸದಿಂದ ಮುಕ್ತಿ ಸಿಕ್ಕಿದೆ. ಇಂದು ಜಾಮೀನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರೇವಣ್ಣ ಅವರು ಜೈಲಿನಿಂದ ಹೊರ ಬಂದರು. ರೇವಣ್ಣ ಅವರು ಜೈಲಿನಿಂದ ಹೊರ ಬರುತ್ತಿದ್ದಂತೆಯೇ ಮಾಧ್ಯಮಗಳತ್ತ ಕೈ ಮುಗಿದು ಮುಂದೆ ಸಾಗಿದರು. ರೇವಣ್ಣ ಬರುವಿಕೆಗಾಗಿ ಅಭಿಮಾನಿಗಳು ಜೈಲಿನ ಹೊರಗೆ ಕಾಯುತ್ತಿದ್ದರು. ಹೀಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಇದನ್ನೂ ಓದಿ: ಜಾಮೀನು ಸಿಕ್ಕಿತ್ತು ಅಂತ ನಾನು ಸಂತೋಷಪಡ್ತೀನಿ ಅಂದುಕೊಳ್ಳಬೇಡಿ: ಹೆಚ್‌ಡಿಕೆ
ಆದರೂ ರೇವಣ್ಣ ಹೊರಗೆ ಬರ್ತಿದ್ದಂತೆ ಕಾರ್ಯಕರ್ತರು ಕಾರಿಗೆ ಅಡ್ಡ ಬಂದಿದ್ದಾರೆ. ಈ ವೇಳೆ ರೇವಣ್ಣ ಕಾರ್ ಮೂವ್ ಮಾಡಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಇದನ್ನೂ ಓದಿ: ದೊಡ್ಡ ತಿಮಿಂಗಿಲದ ಆಡಿಯೋ ಬಿಟ್ರೂ ಅಂತ ದೇವರಾಜೇಗೌಡ ಅರೆಸ್ಟ್ ಮಾಡಿಸಿದ್ದಾರೆ: ಡಿಕೆಶಿ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ
ಸಂತ್ರಸ್ತೆಯ ಕಿಡ್ನಾಪ್ ಆರೋಪ ಎದುರಿಸುತ್ತಿದ್ದ ರೇವಣ್ಣ ಅವರು 6 ದಿನಗಳ ಹಿಂದೆ ಜೈಲು ಸೇರಿದ್ದರು. ನಿನ್ನೆ ಇಡೀ ದಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿತ್ತು. ಬಳಿಕ ಸಂಜೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಜಾಮೀನು ನೀಡಲಾಗಿತ್ತು. ಇದನ್ನೂ ಓದಿ: ಮೂರನೇ ಬಾರಿ ವಾರಣಾಸಿಯಿಂದ ನಾಮಪತ್ರ ಸಲ್ಲಿಸಿದ ಮೋದಿ