ಮುಂಬೈ: ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ ಭೀಕರ ಘಟನೆಯೊಂದು ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಯ ಬಗ್ಗೆ ಆತಂಕ ಹೆಚ್ಚಿಸಿದೆ. ಶನಿವಾರ ಸಂಜೆ 11 ವರ್ಷದ ಬಾಲಕಿಯ ಮೇಲೆ ಬೀದಿನಾಯಿಗಳ ದಂಡು ಇದ್ದಕ್ಕಿದ್ದಂತೆ ದಾಳಿ ನಡೆಸಿದ್ದು, ಆಕೆಯನ್ನು ಎಳೆದಾಡಿ, ಕಚ್ಚಿವೆ.
ಇದರಿಂದ ಆಕೆ ತೀವ್ರವಾಗಿ ಗಾಯಗೊಂಡಿದ್ದಾಳೆ. ಈ ದೃಶ್ಯವನ್ನು ಮನೆಯೊಂದರ ಬಾಲ್ಕನಿಯಿಂದ ವ್ಯಕ್ತಿಯೊಬ್ಬರು ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದಾರೆ. 1 ನಿಮಿಷ ಮತ್ತು 13 ಸೆಕೆಂಡ್‌ಗಳ ವೀಡಿಯೊವು 6ಕ್ಕೂ ಹೆಚ್ಚು ನಾಯಿಗಳಿಂದ ಸುತ್ತುವರೆದಿರುವ ಹುಡುಗಿಯ ಭಯಾನಕ ಸ್ಥಿತಿಯನ್ನು ತೋರಿಸುತ್ತಿದೆ.
ಆಕೆಯನ್ನು ಎಳೆದಾಡಿ ಕೆಸರಿನಲ್ಲಿ ಬೀಳಿಸಿದ ನಾಯಿಗಳು ಬಳಿಕ ಅವಳ ಮೈತುಂಬ ಕಚ್ಚಿವೆ. ಅದೃಷ್ಟವಶಾತ್ ಅದೇ ಸಮಯಕ್ಕೆ ಒಂದಷ್ಟು ಹೆಂಗಸರು ಓಡಿಬಂದು ನಾಯಿಗಳನ್ನು ಓಡಿಸಿ ಆಕೆಯ ಜೀವ ಉಳಿಸಿದ್ದಾರೆ

