ಬೆಂಗಳೂರು: ಇನ್ಮುಂದೆ ತಡರಾತ್ರಿ 1 ಗಂಟೆವರೆಗೆ ಬಾರ್, ಹೋಟೆಲ್, ರೆಸ್ಟೋರೆಂಟ್‌ಗಳು ಓಪನ್ ಇರುತ್ತವೆ. ರಾಜ್ಯದಲ್ಲಿ ಮಧ್ಯರಾತ್ರಿ 1 ಗಂಟೆವರೆಗೆ ಬಾರ್, ಹೋಟೆಲ್, ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡಲಾಗಿದ್ದು, ತಡ ರಾತ್ರಿ 1 ಗಂಟೆ ತನಕ ವಾಣಿಜ್ಯ ವಹಿವಾಟಿಗೆ ಅವಕಾಶ ನೀಡಲಾಗಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 10 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಾರ್, ರೆಸ್ಟೋರೆಂಟ್, ಹೋಟೆಲ್ ಸೇರಿದಂತೆ ವಾಣಿಜ್ಯ ವಹಿವಾಟಿಗೆ ಅವಕಾಶ ಕೇಳಲಾಗಿತ್ತು. ಆದರೆ ಬೆಂಗಳೂರಲ್ಲಿ ಮಾತ್ರ ಸದ್ಯ ಈ ಅವಕಾಶ ನೀಡಾಲಗಿದ್ದು, ಈ ಬಗ್ಗೆ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ.
ಬೆಳಗ್ಗೆ 06.00 ಗಂಟೆಯಿಂದ ಮಾರನೇ ದಿನ ಮುಂಜಾನೆ 01.00 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗಿದ್ದು ಬೇರೆ ಬೇರೆ ಲೈಸನ್ಸ್ ಹೊಂದಿರುವ ಅಂಗಡಿಗಳಿಗೆ ನಿಗದಿಪಡಿಸಿರುವ ಸಮಯದ ಅವಧಿ ಈ ಕೆಳಕಂಡಂತಿದೆ.
1.CL-4 (ಕ್ಲಬ್ ಲೈಸನ್ಸ್)- 9.00 am to 1.00 am
2.CL-6(A) ಸ್ಟಾರ್ ಹೊಟೇಲ್ ಲೈಸನ್ಸ್- 9.00 am to 1.00 am
3.CL-7 (ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್ ಲೈಸನ್ಸ್)- 9.00 am to 1.00 am
4.CL-7D (ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ವ್ಯಕ್ತಿಯ ಮಾಲೀಕತ್ವದ ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್ ಲೈಸನ್ಸ್)- 9.00 am to 1.00 am
5.CL-9 ರಿಫ್ರೆಶ್‌ಮೆಂಟ್ ರೂಂ (Bar) ಲೈಸನ್ಸ್- 10.00 am to 1.00 am

