ಚೆನ್ನೈ : ತಮಿಳು ನಟ ವಿಶಾಲ್ ಅವರು ನಟಿ ಸಾಯಿ ಧನ್ಸಿಕಾ ಅವರೊಂದಿಗೆ ತಮ್ಮ ಜನ್ಮದಿನದಂದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.ಹುಟ್ಟು ಹಬ್ಬದಂದು ನಿಶ್ಚಿತಾರ್ಥದ ಫೋಟೊ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಕುಟುಂಬ ಸದಸ್ಯರು ಹಾಗೂ ಅತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.ಹುಟ್ಟುಹಬ್ಬದಂದು ನನಗೆ ಶುಭ ಹಾರೈಸಿ ಆಶೀರ್ವದಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ನನ್ನ ಹಾಗೂ ಸಾಯಿ ಧನ್ನಿಕಾ ನಿಶ್ಚಿತಾರ್ಥದ ಕ್ಷಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತಸವಾಗುತ್ತಿದೆ ಎಂದು ತಮ್ಮ X ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ವಿಶಾಲ್ ಅವರು ಧನ್ಸಿಕಾರನ್ನು ತುಂಬಾ ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ವರ್ಷ ಮೇ ತಿಂಗಳಲ್ಲಿ ನಡೆದ ಯೋಗಿ ಡಾ ಚಿತ್ರದ ಸಮಾರಂಭದಲ್ಲಿ ತಮ್ಮ ಪ್ರೇಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದರು.
ಆಗಸ್ಟ್ 29 ರಂದು ಮದುವೆಯಾಗುವುದಾಗಿ ಇಬ್ಬರು ಘೋಷಣೆ ಮಾಡಿದ್ದರು. ಆದರೆ, ಕಲಾವಿದ ಸಂಘದ ಕಾರ್ಯದರ್ಶಿಯಾಗಿರುವ ವಿಶಾಲ್, ಕಲಾವಿದರ ಸಂಘದ ಕಟ್ಟಡದ ಉದ್ಘಾಟನೆಯ ನಂತರ ಮದುವೆಯಾಗುವುದಾಗಿ ಹೇಳಿದರು. ಆದರೆ, ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮದುವೆ ಸಮಾರಂಭವೂ ಶೀಘ್ರದಲ್ಲೇ ನಡೆಯುವ ಸಾಧ್ಯತೆ ಇದೆ.
- ಹತ್ಯೆ ಪ್ರಕರಣ ; ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ
- ಲಿಬಿಯಾದಲ್ಲಿ ಗಡಾಫಿ ಪುತ್ರ ಸೈಫ್ ಅಲ್–ಇಸ್ಲಾಂಗೆ ಗುಂಡಿಕ್ಕಿ ಹತ್ಯೆ, ಮತ್ತೆ ಭುಗಿಲೆದ್ದ ರಾಜಕೀಯ ಉದ್ವಿಗ್ನತೆ
- ಮತ್ತಷ್ಟು ದುಬಾರಿಯಾದ ಚಿನ್ನ-ಬೆಳ್ಳಿ, ಇಂದು ಮತ್ತೆ ಬೆಲೆ ಏರಿಕೆ
- ಆನ್‌ಲೈನ್ ಗೇಮಿಂಗ್‌ಗೆ ಬಲಿಯಾದ ಮೂವರು ಅಪ್ರಾಪ್ತ ಸಹೋದರಿಯರು
- ಮನರೇಗಾ ಮರುಸ್ಥಾಪಿಸುವ ಬಗ್ಗೆ ವಿಧಾನಸಭೆಯಲ್ಲಿ ಸರ್ಕಾರ ಮಹತ್ವದ ನಿರ್ಣಯ

