ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಾಲ್ ವಿವಾಹಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಇನ್ನು ಆಗಸ್ಟ್ 10 ಹಾಗೂ 11 ರಂದು ನಡೆಯಲಿರೋ ತರುಣ್ ಮತ್ತು ಸೋನಾಲ್ ಮದುವೆಗೆ ಈಗಾಗಲೇ ಸಖಲ ಸಿದ್ದತೆಗಳು ನಡೆದಿದೆ. ಈಗಾಗಲೇ ಈ ಜೋಡಿ ಇಡೀ ಚಿತ್ರರಂಗ ಹಾಗೂ ಸ್ನೇಹಿತರು ಮತ್ತು ಸಂಬಂಧಿಕರಿಗೆ ತಮ್ಮ ವಿವಾಹದ ಇನ್ವಿಟೇಷನ್ ಕೊಟ್ಟು ತಮ್ಮ ಮದುವೆಗೆ ಆಹ್ವಾನ ಮಾಡಲು ಶುರು ಮಾಡಿದ್ದಾರೆ.
ನಿರ್ದೇಶಕ ತರುಣ್ ವಿಭಿನ್ನವಾಗಿ ತಮ್ಮ ಮದುವೆ ಇನ್ವಿಟೇಷನ್ ಮಾಡಿಸಿದ್ದು, ಕಂಪ್ಲೀಟ್ ಆಗಿ ಪರಿಸರ ಸ್ನೇಹಿಯಾಗಿ ಮಾಡಿದ್ದಾರೆ. ತರುಣ್ ನೀಡುತ್ತಿರುವ ಈ ಇನ್ವಿಟೇಷನ್ ನಲ್ಲಿ ಮದುವೆ ಪತ್ರಿಕೆ , ಒಂದು ಖಾಲಿ ಪುಸ್ತಕ ಅದರಲ್ಲಿ ಬರೆಯೋದಕ್ಕೆ ಎರಡು ಪೆನ್ಸಿಲ್ ಹಾಗೂ ಎರಡು ಪೆನ್ ಮತ್ತು ಒಂದು ಸೀಡ್ ಬಾಲ್ ಇವೆ.
ವಿಶೇಷ ಅಂದ್ರೆ ಮದುವೆ ಮುಗಿದ ನಂತ್ರ ಪತ್ರಿಕೆ ಏನ್ ಮಾಡೋದು ಅಂತ ಯೋಚನೆ ಮಾಡೋ ಹಾಗಿಲ್ಲ, ಯಾಕಂದ್ರೆ ಸೋನಾಲ್ ಮತ್ತು ತರುಣ್ ಮದ್ವೆ ನಂದ್ರ ಪತ್ರಿಕಯನ್ನ ಒಂದು ಮಣ್ಣಿನ ಪಾಟ್ ನಲ್ಲಿ ಹಾಕಿದ್ರೆ ಅದು ಮಣ್ಣಿನಲ್ಲಿ ಬೆರೆದು ಗಿಡ ಬೆಳೆಯುತ್ತೆ…ಅದಷ್ಟೇ ಅಲ್ಲ ಖಾಲಿ ಪುಸ್ತಕದಲ್ಲಿ ಬರೆದು ಹಾಳೆ ಖಾಲಿ ಆದ ನಂತ್ರ ಅದು ಮಣ್ಣು ಸೇರಿದ್ರೆ ಅದ್ರಿಂದಲೂ ಹೂವಿನ ಗಿಡ ಬೆಳೆಯುತ್ತೆ.
ಇನ್ನು ಪೆನ್ ಮತ್ತು ಪೆನ್ಸಿಲ್ ಬೆರೆದು ಖಾಲಿ ಆದ್ರೆ ಅದನ್ನು ಮಣ್ಣಿಗೆ ಹಾಕಿದ್ರೆ ಚಂದದ ಹೂವಿನ ಹಾಗೂ ತರಕಾರಿ ಗಿಡ ಬೆಳೆಯುತ್ತೆ…ಹೀಗೆ ತಮ್ಮ ವಿವಾಹದ ಆಹ್ವಾನ ಪತ್ರಿಕೆ ಸಖತ್ ಸ್ಪೆಷಲ್ ಮತ್ತು ಪರಿಸರ ಸ್ನೇಹಿ ಆಗಿರಲಿ ಅಂತ ತರುಣ್ ಈ ರೀತಿ ಪ್ಲಾನ್ ಮಾಡಿದ್ದಾರೆ.

