ಕೋಲಾರ,ಜೂ.30: ಸರ್ಕಾರಿ ಕಛೇರಿಗಳಲ್ಲಿ ತಾಂಡವಾಡುತ್ತಿರುವ ಭ್ರಷ್ಟಚಾರಕ್ಕೆ ಕಡಿವಾಣ ಹಾಕಿ ಮಾವು ಟೊಮೋಟೊ ಬೆಳೆಗಾರರ ಸಮಸ್ಯೆ ಯನ್ನು ಗಂಭೀರವಾಗಿ ಪರಿಗಣಿಸಿ ಟೊಮೋಟೊ ಮಾರುಕಟ್ಟೆ ಜಾಗದ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಬೇಕೆಂದು ರೈತ ಸಂಘದಿಂದ ಉಸ್ತುವಾರಿ ಸಚಿವರಿಗೆ ಮಾವು, ಟೋಮೋಟೊ ಸಮೇತ ಮನವಿ ನೀಡಿ ಒತ್ತಾಯಿಸಲಾಯಿತು.
ಕೋಲಾರ ಜಿಲ್ಲೆಯ ರೈತರು ಸರ್ಕಾರಕ್ಕೆ ಏನೂ ದ್ರೋಹ ಮಾಡಿದ್ದಾರೆ ಸಚಿವರೇ? ಹಾಲು ತರಕಾರಿ ಚಿನ್ನ ರೇಷ್ಮೆ ಕೊಟ್ಟಂತಹ ಜನತೆಗೆ ನೀವು ಕೊಟ್ಟಿರುವುದು ಏನೂ ಬರೀ ನೋವು ಕಣ್ಣೀರು, ಹೋರಾಟ ಇದೇನಾ ನಮ್ಮ ಜಿಲ್ಲೆಗೆ ಸರ್ಕಾರ ನೀಡಿರುವ ಕೊಡುಗೆ ಎಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಸಚಿವರನ್ನು ಆಕ್ರೋಶದಿಂದ ಪ್ರಶ್ನೆ ಮಾಡಿದರು.
3 ತಿಂಗಳಿAದ ಮಾವು, ಟೊಮೋಟೊ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ರಸ್ತೆಯಲ್ಲಿ ಸುರಿಯುವ ಜೊತೆಗೆ ತೋಟದಲ್ಲಿಯೇ ಕೊಳೆಯುತ್ತಿದ್ದು, ಬೆಳೆಗಾರರ ರಕ್ಷಣೆಗೆ ಸರ್ಕಾರ ನಿಲ್ಲಬೇಕೆಂದು ನಿರಂತರವಾಗಿ ರೈತರು ಬೀದಿಗೆ ಬಂದು ಹೋರಾಟ ಮಾಡುತ್ತಿದ್ದರೂ ಕನಿಷ್ಠ ನೊಂದ ರೈತರ ಸಮಸ್ಯೆಗಳನ್ನು ಆಲಿಸಲು ಮಾರುಕಟ್ಟೆಗಾಗಲಿ ರೈತರ ತೋಟಗಳಿಗಾಗಲಿ ಬೇಟಿ ನೀಡದೆ ಇರುವುದು ರೈತ ವಿರೋದಿ ದೋರಣೆ ಅಲ್ಲವೇ ಸಚಿವರನ್ನು ತರಾಟೆಗೆ ತೆಗೆದುಕೊಂಡರು.
1 ತಿಂಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭೂ ಪರಿವರ್ತನೆ ಇಲಾಖೆಯಲ್ಲಿನ ಅಧಿಕಾರಿಗಳಿಂದ ಹಿಡಿದು ಆರು ತಾಲ್ಲೂಕಿನ ಕಂದಾಯ ಸರ್ವೇ ಅಧಿಕಾರಿಗಳ ಮೇಲೆ ಲೋಕಾ ಪ್ರಕರಣಗಳು ಹೆಚ್ಚಾಗಿ ಕಚೇರಿಗಳು ಅಧಿಕಾರಿಗಳು ಖಾಲಿ ಆಗಿ ಜನಸಾಮಾನ್ಯರ ಕೆಲಸಗಳಾಗದೆ ಪರದಾಡುತ್ತಿರುವ ಗಂಭೀರ ಸಮಸ್ಯೆ ನಿಮ್ಮ ಗಮನಕ್ಕೆ ಬಂದಿಲ್ಲವೇ ನೀವೇ ಸೂಚಿಸಿ ಲಂಚ ಪಡೆದು ಸಮಪಾಲು ನಮಗೂ ಕೊಡಿ ಆದೇಶ ಮಾಡಿದ್ದೀರಿಯೇ ಎಂದು ಮನವರಿಕೆ ಮಾಡಿಕೊಂಡು ಜ್ಞಾಪಿಸಿಕೊಂಡು ಸಭೆಯಲ್ಲಿ ಪ್ರಸ್ತಾಪಿಸಿ ಎಂದು ಸಲಹೆ ನೀಡಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ನೂರಾರು ವರ್ಷಗಳಿಂದ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ಪಿ.ನಂಬರ್ ದುರಸ್ತಿ ಹಗರಣ, ಮಾರುಕಟ್ಟೆ ಜಾಗದ ಸಮಸ್ಯೆ, ಕೆ.ಸಿ ವ್ಯಾಲಿ ಮೂರನೇ ಹಂತದ ಶುದ್ದೀಕರಣ ನಕಲಿ ಬಿತ್ತನೆ ಬೀಜ ಕೀಟನಾಶಕ ಆಕ್ರಮ ನರ್ಸರಿಗಳಿಗೆ ಕಡಿವಾಣ, ಕೆರೆ ಒತ್ತುವರಿ ಪ್ರಕರಣಗಳು ಸಾವಿರಾರು ಎಕರೆ, ಗೋಮಾಳ, ಗುಂಡುತೋಪು ಆಸ್ತಿಗಳ ರಕ್ಷಣೆ, ಯಾವಾಗ ಎಂದು ಸಚಿವರನ್ನು ಪ್ರಶ್ನೆ ಮಾಡುವ ಜೊತೆಗೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಎಂದು ಒತ್ತಡ ಹಾಕಿದರು.
ಕೊಲಾರ್ ಜಿಲ್ಲೆಯಲ್ಲಿನ ರೈತರು ಹಾಗೂ ಅಲ್ಪ ಪ್ರಮಾಣದ ಆಹಾರ ಪ್ರಕ್ರಿಯೆ ಉದ್ಯಮಿಗಳಿಗೆ ಸಹಾಯವಾಗಲೆಂದು, ಪ್ರಧಾನಮಂತ್ರಿ ಅಲ್ಪ ಆಹಾರ ಪ್ರಕ್ರಿಯೆ ಉದ್ಯಮಗಳ ರೂಪುಗೊಳ್ಳುವಿಕೆ ಯೋಜನೆ (Pಒಈಒಇ) ಅಡಿಯಲ್ಲಿ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ (ಏಗಿಏ), ಕೊಲಾರ್ ನಲ್ಲಿರುವ ಅommoಟಿ iಟಿಛಿubಚಿಣioಟಿ ಛಿeಟಿಣಡಿe ಕೇಂದ್ರ ಸರ್ಕಾರದ ಅನುದಾನದಲ್ಲಿ 2022 ವರ್ಷದಲ್ಲಿ ಹಣ ಬಿಡುಗಡೆ ಆಗಿದ್ದ ಯೋಜನೆ ಎಲ್ಲಿ ಹೋಯಿತೆಂದು ತನಿಖೆ ಮಾಡುವ ಜೊತೆಗೆ ಸ್ಥಳಿಯರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಹದಗೆಟ್ಟಿರುವ ಜಿಲ್ಲಾಸ್ಪತ್ರೆಗಳಿಗೆ ಮರು ಜೀವ ನೀಡಿ ಕೃಷಿ ಆದಾರಿತ ಕೈಗಾರಿಕೆಗಳಿಗೆ ಆದ್ಯತೆ ನೀಡಿ ರೈತರ ರಕ್ಷಣೆಗೆ ಸರ್ಕಾರ ನಿಲ್ಲಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ ಕಂದಾಯ ಸರ್ವೇ ಇಲಾಖೆಯ ಮೇಲಿನ ಲೋಕಾ ಪ್ರಕರಣಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ನೀಡಿದರು.
ವರದಿ… ಅರುಣ್ ಕುಮಾರ್

