‘ಕೆಜಿಎಫ್’ ಸಿನಿಮಾದ ಯಶಸ್ಸಿನ ಬಳಿಕ ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ಸರಳವಾಗಿ ನೆರವೇರಿದ್ದು ಯಶ್ ಅಭಿನಯದ 19ನೇ ಸಿನಿಮಾ ಟಾಕ್ಸಿಕ್ ಕಥೆ ಏನಿರಬಹುದು ಎಂದೂ ಫ್ಯಾನ್ಸ್ ವಲಯದಲ್ಲಿ ಕುತೂಹಲವಿದೆ.
ಮೊನ್ನೆ ಮೊನ್ನೆಯಷ್ಟೇ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀಮಂಜುನಾಥನ ಆಶೀರ್ವಾದ ಪಡೆದ ಬೆನ್ನಲ್ಲೇ ಇದೀಗ ತಮ್ಮ ಬಹು ನಿರೀಕ್ಷಿತ ಮೂವಿ ಟಾಕ್ಸಿಕ್ಗೆ ಮುಹೂರ್ತ ಇಟ್ಟ ಸರಿಯಾದ ಸಮಯಕ್ಕೆ ಪೂಜೆ ನೆರವೇರಿಸಿದ್ದಾರೆ. ಟಾಕ್ಸಿಕ್ ಅದ್ಧೂರಿಯಾಗಿ ಸೆಟ್ಟೇರಿದೆ. ಚಿತ್ರತಂಡ- ಆಪ್ತರ ಸಮ್ಮುಖದಲ್ಲಿ ಟಾಕ್ಸಿಕ್ ಮೂವಿ ಮುಹೂರ್ತದ ದೇವರ ಪೂಜೆ ಮಾಡಲಾಯಿತು. ಇಲ್ಲಿ ಇನ್ನೊಂದು ವಿಶೇಷ ಎಂದರೆ ಟಾಕ್ಸಿಕ್ಗೆ ಅಭಿಮಾನಿ ಕೈಯಿಂದಲೇ ಕ್ಲ್ಯಾಪ್ ಮಾಡಿಸಲಾಗಿದೆ.
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಗೆ ಆರ್ಟ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುವ ಸುನೀಲ್ ಎನ್ನುವ ಅಭಿಮಾನಿ ಕ್ಲ್ಯಾಪ್ ಮಾಡಿಸಿದ್ದಾರೆ. ಯಶ್ ಅವರ ಬಹುತೇಕ ಸಿನಿಮಾಗಳಿಗೆ ಸುನೀಲ್ ಅವರೇ ಕೆಲಸ ಮಾಡಿದ್ದಾರೆ.
ಇನ್ನೂ ಈ ಚಿತ್ರಕ್ಕೆ ಗೀತು ಮೋಹನ್ ದಾಸ್ ನಿರ್ದೇಶನ ಮಾಡಲಿದ್ದಾರೆ. ಯಶ್ ನಟನೆಯ ಈ ಸಿನಿಮಾವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಸದ್ಯ ಯಶ್ ಹೊಸ ಸಿನಿಮಾದ ಶೂಟಿಂಗ್‌ಗೆ ಚಾಲನೆ ಸಿಕ್ಕಿರುವ ವಿಷ್ಯ ತಿಳಿದು ಅಭಿಮಾನಿಗಳು ಸಂತಸಗೊಂಡಿದ್ದಾರೆ.
ಕೆಜಿಎಫ್ 2 ಸೂಪರ್ ಸಕ್ಸಸ್ ನಂತರ ಅಂದರೆ 3 ವರ್ಷಗಳ ಬಳಿಕ ಟಾಕ್ಸಿಕ್ ಸಿನಿಮಾದಿಂದ ಯಶ್ ಬರುತ್ತಿದ್ದಾರೆ. ಹಾಗಾಗಿಯೇ ಈ ಸಿನಿಮಾ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.



