ತುರುವೇಕೆರೆ. ತಾಲೂಕಿನ ಬಾಣಸಂದ್ರ ರಸ್ತೆಯಲ್ಲಿರುವ ತಾವರೆಕೆರೆ ಗ್ರಾಮದ ಬಳಿ ತಾವರೆಕೆರೆ ಬಡಾವಣೆ ವಾಸಿಯಾದ ಸುರೇಶ್ 38 ವರ್ಷದ ವ್ಯಕ್ತಿ ಓರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ತಾವರೆಕೆರೆ ಗ್ರಾಮದಲ್ಲಿರುವ ತಾವರೆಕೆರೆ ಗ್ರಾಮ ಬಡಾವಣೆ ವಾಸಿಯಾದ 38 ವರ್ಷದ ಸುರೇಶ್ ಎಂಬ ವ್ಯಕ್ತಿ ಗಾರೆ ಕೆಲಸ ಮಾಡುತ್ತಿದ್ದು ಪ್ರತಿನಿತ್ಯದಂತೆ ಮಂಗಳವಾರವು ಸಹ ಕೆಲಸಕ್ಕೆ ತೆರಳಿ ಸಂಜೆ ವೇಳೆಗೆ ಮನೆಗೆ ವಾಪಸ್ ಆಗಿದ್ದಾನೆ.
ಮಂಗಳವಾರ ರಾತ್ರಿ 8 ರ ಸಮಯದಲ್ಲಿ ಮೃತ ಸುರೇಶ್ ಮನೆಯಿಂದ ಹೊರಗೆ ಹೋಗಿದ್ದು ಆ ಸಮಯದಲ್ಲಿ ಮನೆಯಲ್ಲಿ ಯಾರೂ ಸಹ ಇರಲಿಲ್ಲ ಜೊತೆಗೆ ಮೃತ ಸುರೇಶ್ ಅವರ ಪತ್ನಿ ಯಶೋದಮ್ಮ ಎಂಬುವರು ಈಗಾಗಲೇ ಅಂಗವಿಕಲೆ ಕೂಡ ಆಗಿದ್ದು, ಒಂದು ತಿಂಗಳ ಹಿಂದೆ ಅಷ್ಟೇ ಗರ್ಭಕೋಶದ ಚಿಕಿತ್ಸೆ ಪಡೆದು ತನ್ನ ತವರು ಮನೆಯಲ್ಲಿ 16 ವರ್ಷದ ಮಗಳೊಂದಿಗೆ ಉಳಿದುಕೊಂಡಿದ್ದು ಮನೆಯಲ್ಲಿ ಯಾರು ಇರಲಿಲ್ಲ ಕೂಲಿ ಕೆಲಸಕ್ಕೆ ತೆರಳಿ ಮನೆಯಲ್ಲಿ ಇರುತ್ತಿದ್ದರು ಎಂಬುದು ಸ್ಥಳೀಯರಿಂದ ತಿಳಿದು ಬಂದಿದೆ,
ಒಟ್ಟಾರೆ ಮೃತ ಸುರೇಶ್ ಅವರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ, ಈ ಅಪಘಾತ ಮಂಗಳವಾರ ರಾತ್ರಿ ಅಥವಾ ಬುಧವಾರ ಬೆಳಿಗ್ಗೆ ಯಾವ ಸಮಯದಲ್ಲಿ ನಡೆದಿದೆ ಎಂಬುದು ಇನ್ನು ತಿಳಿದು ಬಂದಿಲ್ಲ ಒಟ್ಟಾರೆ ಈ ಅಪಘಾತ ಬಹುಶಹ ನಾಲ್ಕು ಚಕ್ರದ ಕಾರಿನಿಂದ ಆಗಿದೆ ಎಂಬುದು ಸ್ಥಳದಲ್ಲಿ ಬಿದ್ದಿರುವ ಕೆಲವೊಂದು ವಸ್ತುಗಳಿಂದ ಮೇಲ್ನೋಟಕ್ಕೆ ಕಾಣುತ್ತಿದೆ ಇನ್ನು ಸ್ಥಳಕ್ಕೆ ತುರುವೇಕೆರೆ ಸಿಪಿಐ ಲೋಹಿತ್ ಕುಮಾರ್ ಸಬ್ ಇನ್ಸ್ಪೆಕ್ಟರ್ ಸಂಗಮೇಶ್ ಮೇಟಿ ಹಾಗೂ ಸಿಬ್ಬಂದಿ ವರ್ಗ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ,

