ಮಂಡ್ಯ: ಐಸ್‌ಕ್ರೀಂ ತಿಂದ ಬಳಿಕ ಅವಳಿ ಮಕ್ಕಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ತ್ರಿಶುಲ್ ಹಾಗೂ ತ್ರಿಶ ಸಾವನ್ನಪ್ಪಿದ ಕಂದಮ್ಮಗಳು. ಈ ಇಬ್ಬರು ಪೂಜಾ ಮತ್ತು ಪ್ರಸನ್ನ ದಂಪತಿ ಮಕ್ಕಳು. ನಿನ್ನೆ ಮಧ್ಯಹ್ನ ಮಕ್ಕಳಿಗೆ ತಾಯಿ ಐಸ್‌ಕ್ರೀಂ ತಿನ್ನಿಸಿದ್ದರು. ತಳ್ಳುವ ಗಾಡಿಯಿಂದ ಐಸ್‌ಕ್ರೀಂ ಕೊಡಿಸಿದ್ದರು. ಆನಂತರ ಮಕ್ಕಳು ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಇದನ್ನೂ ಓದಿ:ಸರ್ಕಾರಿ ಬಸ್‌ನಲ್ಲಿ ಬಿಕಿನಿ ತೊಟ್ಟು ಸಂಚರಿಸಿದ ಮಹಿಳೆ
ಆದರೆ ಗ್ರಾಮದಲ್ಲಿ ಉಳಿದ ಮಕ್ಕಳು ಸಹ ಐಸ್‌ಕ್ರೀಂ ತಿಂದಿದ್ದರು. ಬೇರೆ ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಅವಳಿ ಮಕ್ಕಳ ಸಾವಿಗೆ ಇದುವರೆಗೂ ಕಾರಣ ತಿಳಿದುಬಂದಿಲ್ಲ. ಸದ್ಯ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪರೀಕ್ಷೆ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಇದನ್ನೂ ಓದಿ: ಮಂಡ್ಯಕ್ಕೆ ಕೈ ನಾಯಕ ರಾಹುಲ್ ಎಂಟ್ರಿ, ಇಂಚಿಂಚೂ ಹೆಲಿಕಾಪ್ಟರ್ ಚೆಕ್ಕಿಂಗ್
ಅರಕೆರೆ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಅಕ್ರಮ ಮದ್ಯ ಶಂಕೆ ಮೇಲೆ ದಾಳಿ- ದಾಳಿಯಲ್ಲಿ 18 ಕೋಟಿ ಪತ್ತೆ