ಬಿಗ್ ಬಾಸ್ ಮನೆಯಲ್ಲಿ ವಿಲನ್ ಪ್ರವೇಶಿಸಿದ ಬಳಿಕ ಸ್ಪರ್ಧಿಗಳ ವರ್ತನೆ, ಸಂಬಂಧಗಳು ಒಂದರ ಹಿಂದೆ ಒಂದರಂತೆ ಬದಲಾಗುತ್ತಿವೆ. ವಿಶೇಷವಾಗಿ ಮನೆಯಲ್ಲಿ ಫೇಮಸ್ ಜೋಡಿಯಾಗಿದ್ದ ಗಿಲ್ಲಿ–ಕಾವ್ಯ ಸಂಬಂಧದಲ್ಲಿ ಈಗ ಗಂಭೀರ ಬಿರುಕು ಮೂಡಿರುವುದು ಸ್ಪಷ್ಟವಾಗಿದೆ.
ವಿಲನ್ ನೀಡಿದ ಟಾಸ್‌ಕ್‌ನಲ್ಲಿ ಕಾವ್ಯ ಕಣ್ಣೀರಿಟ್ಟಂತೆ ಮಾಡಬೇಕು ಎಂದು ಗಿಲ್ಲಿಗೆ ಸೂಚಿಸಲಾಗಿತ್ತು. ಈ ಟಾಸ್‌ಕ್‌ನಲ್ಲಿ ಗಿಲ್ಲಿ ಗೆದ್ದಂತೆ ಕಾಣುತ್ತಿದ್ದು, ಕಾವ್ಯ ಗಿಲ್ಲಿಯ ಬಗ್ಗೆ ಮಾತನಾಡಿದ ಮಾತುಗಳನ್ನು ನೆನೆದು ಭಾವುಕರಾಗಿರುವ ದೃಶ್ಯವು ಪ್ರೋಮೊನಲ್ಲಿ ಬಿಡುಗಡೆಯಾಗಿದೆ. ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಈ ಪ್ರೋಮೊ ಚರ್ಚೆಗೆ ಗ್ರಾಸವಾಗಿದೆ.
ಒಂದರನ್ನೊಬ್ಬರು ಬಿಟ್ಟುಕೊಡಲಾರದಷ್ಟು ಹತ್ತಿರವಾಗಿದ್ದ ಗಿಲ್ಲಿ-ಕಾವ್ಯದ ಜೋಡಿ, ಇತರೆ ಸ್ಪರ್ಧಿಗಳ ಟಾಂಟ್‌ಗಳನ್ನೂ ಪರಿಗಣಿಸದೇ ತಮ್ಮ ಬಾಂಧವ್ಯ ಕಾಯ್ದುಕೊಂಡಿದ್ದರು. ಆದರೆ ವಿಲನ್ ಎಂಟ್ರಿಯ ನಂತರ ಪರಿಸ್ಥಿತಿ ತಲೆ ಕೆಳಗಾಗಿದೆ. ಮೊಟ್ಟ ಮೊದಲ ಬಾರಿಗೆ ಕಾವ್ಯ ಗಿಲ್ಲಿಯನ್ನು ನಾಮಿನೇಟ್ ಮಾಡಿದದ್ದು ಎಲ್ಲರಿಗೂ ಅಚ್ಚರಿ ತಂದಿತ್ತು. ಅದಾಗಿನಿಂದ ಗಿಲ್ಲಿ ‘ಒಂದೇ ತಟ್ಟೆಯಲ್ಲಿ ಅನ್ನ ತಿಂದ್ದೇ ಮುಹೂರ್ತ ಇಟ್ಟಿಲ್ಲ… ಬೆನ್ನಿಗೆ ಚೂರಿ ಹಾಕಿದ್ರಲ್ಲ’ ಎಂದು ಪರೋಕ್ಷವಾಗಿ ಟಾಂಗ್ ಕೊಡತೊಡಗಿದ್ದರು.
ಇದೇ ವೇಳೆ, ಮನೆಮಂದಿ ಲಕ್ಷುರಿ ಬಜೆಟ್ ಕಳೆದುಕೊಂಡಿದ್ದಕ್ಕೆ ವಿಲನ್ ಸರ್ಪ್ರೈಸ್ ಗಿಫ್ಟ್ ನೀಡಿದರು. ಚಿಕನ್, ಮಟನ್ ಹಾಗೂ ಹಲವು ಮಸಾಲೆ ಐಟಮ್ಸ್‌ಗಳನ್ನು ನೀಡುತ್ತ, ಮನೆಮಂದಿಗೆ ಸ್ಪೆಷಲ್ ಊಟ ಮಾಡಿಸುವ ಜವಾಬ್ದಾರಿಯನ್ನು ಗಿಲ್ಲಿ ಹಾಗೂ ಅಶ್ವಿನಿಗೆ ನೀಡಿದರು.
ಆದರೆ ಇಲ್ಲಿ ಸವಾಲೇ ಹೆಚ್ಚು—ಗಿಲ್ಲಿಗೆ ಅಡುಗೆ ಬರದು, ಅಶ್ವಿನಿ ನಾನ್‌ವೆಜ್ ತಿನ್ನುವುದೇ ಇಲ್ಲ. ಈ ಪರಿಸ್ಥಿತಿಯಲ್ಲೂ ಅಶ್ವಿನಿಯೇ ಮುಂದಾಗಿ, “ನಾವಿಬ್ಬರೂ ಅಡುಗೆ ಮಾಡಿ ಎಲ್ಲರಿಗೂ ಊಟ ಮಾಡಿಸೋಣ” ಎಂದು ಗಿಲ್ಲಿಯನ್ನು ಮನವರಿಕೆ ಮಾಡಿದರು. ಇವರಿಗೆ ಅಸಿಸ್ಟೆಂಟ್ ಆಗಿ ರಜತ್‌ರನ್ನು ಆಯ್ಕೆ ಮಾಡಲಾಯಿತು.
ಬಿಗ್ ಬಾಸ್ ಮನೆಯಲ್ಲಿ ದಿನೇ ದಿನೇ ತೀವ್ರವಾಗುತ್ತಿರುವ ಡ್ರಾಮಾ, ಗಿಲ್ಲಿ-ಕಾವ್ಯ ನಡುವಿನ ಹೊಸ ಬಿರುಕು ಹಾಗೂ ವಿಲನ್ ಟಾಸ್‌ಕ್ ಮನೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

