ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧದ ಲೈಂಗಿಕ ಹಗರಣ ಬಿಜೆಪಿ (BJP) ಮತ್ತು ಜೆಡಿಎಸ್ (JDS) ನಡುವಿನ ಮೈತ್ರಿಗೆ ಧಕ್ಕೆ ತರಬಹುದು ಎಂಬ ಅನುಮಾನಗಳ ಮಧ್ಯೆ ಎಚ್.ಡಿ. ಕುಮಾರಸ್ವಾಮಿ (HD.Kumaraswamy) ಮತ್ತು ಅಮಿತ್ ಶಾ (Amit Shah) ನಡುವೆ ಮಹತ್ವದ ಮಾತುಕತೆ ನಡೆದಿದೆ.
ನಿನ್ನೆ ಶನಿವಾರ (Saturday) ತಡರಾತ್ರಿ ನಡೆದ ಈ ಸಭೆಯಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣ ಮತ್ತು ಮೈತ್ರಿ ಬಗ್ಗೆ ಚರ್ಚೆಗಳಾಗಿವೆ. ಈ ವೇಳೆ ಜೆಡಿಎಸ್‌ನ ಮಿತ್ರ ಪಕ್ಷವಾಗಿ ಬಿಜೆಪಿ ಗಟ್ಟಿಯಾಗಿ ನಿಲ್ಲುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭರವಸೆ ನೀಡಿದರೆನ್ನಲಾಗಿದೆ.ಇದನ್ನೂ ಓದಿ:ರೇವಣ್ಣ ವಿರುದ್ಧ ಕಿಡ್ನ್ಯಾಪ್ ಪ್ರಕರಣ: SIT ಗೆ ಸರಿಯಾಗಿ ಸ್ಪಂದಿಸದ ಸಂತ್ರಸ್ತೆ
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಪ್ರಜ್ವಲ್ ಪ್ರಕರಣದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಏನಾಗುತ್ತೆ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ, ಈಗ ತನಗೆ ಮೈತ್ರಿ ಮುಖ್ಯ ಅಲ್ಲ ಎಂದು ಹೇಳುವ ಮೂಲಕ ಕುತೂಹಲ ಕೆರಳಿಸಿದ್ದರು. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಮತ್ತು ಎಚ್ಡಿಕೆ ಭೇಟಿ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.ಇದನ್ನೂ ಓದಿ: ಇಂಡಿಗನತ್ತ ಇವಿಎಂ ಧ್ವಂಸ ಪ್ರಕರಣ: ಕಾಡು ಸೇರಿದ ಗ್ರಾಮಸ್ಥರನ್ನು ನಾಡಿಗೆ ಕರೆತಂದ ಜಿಲ್ಲಾಡಳಿತ
ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ಈ ನೆಲದ ಕಾನೂನು ಏನಿದೆ ಅದರ ಪ್ರಕಾರವೇ ಹೋಗಲಿ ಎಂದು ಹೇಳಿರುವ ಅಮಿತ್ ಶಾ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಅವರ ಇಳಿ ವಯಸ್ಸಿಲ್ಲಿ ಇಂತಹ ನೋಟು ಉಂಟಾಗಬಾರದಾಗಿತ್ತು ಎಂದು ವಿಷಾದಿಸಿದರು ಎನ್ನಲಾಗಿದೆ.ಇದನ್ನೂ ಓದಿ: ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು
ರಾಜ್ಯದ ಮೊದಲ ಹಂತದ ಚುನಾವಣೆಯಲ್ಲಿ ಜೆಡಿಎಸ್‌ನ ಮತಗಳು ಬಿಜೆಪಿ ಅಭ್ಯರ್ಥಿಗಳಿಗೆ ಹೆಚ್ಚಾಗಿ ಬಂದಿದೆ. ಪಕ್ಷದ ಸರ್ವೆ ವರದಿಗಳಲ್ಲೂ ಈ ಅಂಶ ದಾಖಲಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮುಂದುವರಿಯುವ ಬಗ್ಗೆ ಯಾವ ಅನುಮಾನವೂ ಬೇಡ. ಬಿಜೆಪಿ ಪಕ್ಷ ಮೈತ್ರಿಗೆ ಬದ್ಧವಾಗಿದೆ ಎಂದೂ ಮಾಜಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರು ಕುಮಾರಸ್ವಾಮಿಗೆ ಅಭಯ ನೀಡಿರುವುದು ತಿಳಿದುಬಂದಿದೆ.ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದ ಮಡದಿಯನ್ನೇ ಹತ್ಯೆ ; ನಡೆದಿದ್ದೇನು?

