By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಇಂಡಿಗನತ್ತ ಇವಿಎಂ ಧ್ವಂಸ ಪ್ರಕರಣ: ಕಾಡು ಸೇರಿದ ಗ್ರಾಮಸ್ಥರನ್ನು ನಾಡಿಗೆ ಕರೆತಂದ ಜಿಲ್ಲಾಡಳಿತ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - Latest - ಇಂಡಿಗನತ್ತ ಇವಿಎಂ ಧ್ವಂಸ ಪ್ರಕರಣ: ಕಾಡು ಸೇರಿದ ಗ್ರಾಮಸ್ಥರನ್ನು ನಾಡಿಗೆ ಕರೆತಂದ ಜಿಲ್ಲಾಡಳಿತ

Latestಚಾಮರಾಜನಗರ-Chamarajanagaraರಾಜ್ಯ-Karnataka

ಇಂಡಿಗನತ್ತ ಇವಿಎಂ ಧ್ವಂಸ ಪ್ರಕರಣ: ಕಾಡು ಸೇರಿದ ಗ್ರಾಮಸ್ಥರನ್ನು ನಾಡಿಗೆ ಕರೆತಂದ ಜಿಲ್ಲಾಡಳಿತ

Published May 5, 2024
Share
2 Min Read
engadinatha copy engadinatha copy engadinatha copy
SHARE

ಚಾಮರಾಜನಗರ: ಜಿಲ್ಲೆಯ ಹನೂರು (Hanuru) ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಇವಿಎಂ (EVM) ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿಯಿಂದ ಕಾಡಿನಲ್ಲಿ ಅವಿತಿದ್ದ ಗ್ರಾಮಸ್ಥರನ್ನು (Villagers) ಚಾಮರಾಜನಗರ (Chamarajnagar) ಜಿಲ್ಲಾಡಳಿತ ನಾಡಿಗೆ ಕರೆತಂದಿದೆ. ಪ್ರಕರಣದಲ್ಲಿ

ಭಾಗಿಯಾದವರ ಮೇಲೆ ಮಾತ್ರ ಕ್ರಮ ಕೈಗೊಳ್ಳಲಾಗುವುದು. ಉಳಿದವರು ಹೆದರುವ ಅವಶ್ಯಕತೆ ಇಲ್ಲ. ನಿರ್ಭೀತಿಯಿಂದ ಇರಬಹುದು ಎಂದು ಗ್ರಾಮಸ್ಥರಿಗೆ ಉಪವಿಭಾಗಾಧಿಕಾರಿ ಶಿವಮೂರ್ತಿ, ಡಿವೈಎಸ್ಪಿ ಧರ್ಮೇಂದ್ರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಭಯ ಧೈರ್ಯ ತುಂಬಿದಿದ್ದಾರೆ. ಇದನ್ನೂ ಓದಿ: ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು

ಬಂಧನದ ಭಯದಿಂದ ಗ್ರಾಮಸ್ಥರು ಊರು ಖಾಲಿ ಮಾಡಿದ್ದರು. ಹೀಗಾಗಿ ಗ್ರಾಮದಲ್ಲಿ ವೃದ್ದರು, ಚಿಕ್ಕ ಮಕ್ಕಳು ಜಾನುವಾರುಗಳಿಗೆ ಆರೈಕೆ ಇಲ್ಲದೆ ಪರದಾಡಿದ್ದು, ಮೇವು ನೀರು ಕೊಡುವವರು ಇಲ್ಲದೆ ಎರಡು ಎಮ್ಮೆಗಳು ಸಾವನ್ನಪ್ಪಿದ್ದವು. ಹೀಗಾಗಿ ಇದನ್ನು ಮನಗಂಡು ಕಾಡಿನಲ್ಲಿ ಅವಿತಿದ್ದ ಗ್ರಾಮಸ್ಥರನ್ನು ಪತ್ತೆ ಹಚ್ಚಿ ಊರಿಗೆ ಕರೆತರಲಾಗಿದೆ.

ಘಟನೆ ಹಿನ್ನಲೆ
ಸೂಕ್ತ ಮೂಲಭೂತ ಸೌಕರ್ಯ ನೀಡುವಂತೆ ಪ್ರತಿಭಟನೆ ನಡೆಸಿ ಮತದಾನ ಬಹಿಷ್ಕರಿಸಿದ್ದ ಮತದಾರರ ಮನವೊಲಿಸಿ ಮತದಾನಕ್ಕೆ ಕರೆ ತಂದ ವೇಳೆ ಭಾರಿ ಗಲಭೆ ಸೃಷ್ಠಿಯಾಗಿತ್ತು. ಇಂಡಿಗನತ್ತ ಮತಗಟ್ಟೆ 146 ರ ಒಳ ನುಗ್ಗಿದ ಪ್ರತಿಭಟನಾಕಾರರು ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಮತಗಟ್ಟೆ ಹಾಗೂ ಇವಿಎಂ ಮಷಿನ್ ಧ್ವಂಸ ಗೊಳಿಸಿದ್ದರು.ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದ ಮಡದಿಯನ್ನೇ ಹತ್ಯೆ ; ನಡೆದಿದ್ದೇನು

ಗಲಭೆ ಪ್ರಕರಣದ ಹಿನ್ನಲೆ 33 ಮಂದಿ ಪೊಲೀಸರ ಅಥಿತಿಯಾದ್ರೆ 250 ಕ್ಕೂ ಹೆಚ್ಚು ಮಂದಿಯ ಮೇಲೆ ಎಫ್‌ಐ ಆರ್ ದಾಖಲಾಗಿದೆ. ಇತ್ತ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಗ್ರಾಮದಲ್ಲಿದ್ದವರು ಪರಾರಿಯಾಗಿದ್ದು ಕೇವಲ ಮಂದಾರೆ ಹಾಡಿಯ 71 ಮಂದಿಯಷ್ಟೇ ಮತದಾನ ಮಾಡಿದ್ದರು. ಮತಗಟ್ಟೆ 146 ರಲ್ಲಿ ಒಟ್ಟು 528 ಮತದಾರರಿದ್ದು ಈ ಪೈಕಿ 71 ಮಂದಿ ಮಾತ್ರ ಮತದಾನ ಮಾಡಿದ್ದರು.

ಇನ್ನು ಇಂಡಿಗನತ್ತ ಗ್ರಾಮದ ಸುತ್ತಾ ಖಾಕಿ ಸರ್ಪಗಾವಲು ಹಾಕಿದ್ದು ಹೆಜ್ಜೆ ಹೆಜ್ಜೆ ಪೊಲೀಸರು ನಿಯೋಜನೆ ಗೊಂಡಿದ್ದರು. ಹೆಚ್ಚುವರಿ ಎಸ್.ಪಿ ಉದೇಶ್ ಸ್ಥಳದಲ್ಲೇ ಬೀಡು ಬಿಟ್ಟು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನಿಗಾ ವಹಿಸಿದ್ದರು. ಇದನ್ನೂ ಓದಿ: “ಕಮಲಕ್ಕೆ” ಮತ ಹಾಕ್ತೇವೆ ಎಂದಿದ್ದಕ್ಕೆ “ಕೈ” ಕಾರ್ಯಕರ್ತರಿಂದ ಹಲ್ಲೆ

ಘಟನೆಯಿಂದಾಗಿ ಇತ್ತೀಚೆಗೆ ಮರು ಮತದಾನ ಮಾಡಲಾಗಿದ್ದು, ಮುಂಜಾನೆ 7 ಗಂಟೆಯಿAದ ಪೊಲೀಸರ ಬಿಗಿ ಭದ್ರತೆಯಲ್ಲಿ ಮತದಾನ ಕಾರ್ಯ ಆರಂಭ ಮಾಡಲಾಗಿತ್ತು. ಬೆಳಗ್ಗೆ 7 ಗಂಟೆಯಿಂದ ಸಂಜೆ ವರೆಗೂ 71 ಮಂದಿಯಷ್ಟೇ ತಮ್ಮ ಹಕ್ಕನ್ನ ಚಲಾಯಿಸಿದ್ದರು.

mahadeshwara hill copy mahadeshwara hill copy mahadeshwara hill copy

ಸದ್ಯ ಪರಾರಿಯಾಗಿರುವ 250 ಮಂದಿ ಗಲಭೆ ಪ್ರಕರಣದ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಒಂದೆಡೆಯಾದರೆ ಮತ್ತೊಂದೆಡೆ ಮತದಾನ ಮಾಡಿದ ಮೆಂದಾರೆ ಹಾಡಿಯ ಜನತೆಗೆ ಭದ್ರತೆಯನ್ನ ನೀಡಲಾಗಿದೆ. ಒಟ್ಟಾರೆ ಇಂಡಿಗನತ್ತ ಮರು ಮತದಾನ ಭಾಗಶಃ ಯಶಸ್ವಿಯಾಗಿದ್ದು ಜಿಲ್ಲಾಡಳಿತ ಯಾವುದೆ ಸಮಸ್ಯೆಯಾಗದಂತೆ ಜವಬ್ದಾಯಿಯನ್ನ ಮುಗಿಸಿತ್ತು. ಇದನ್ನೂ ಓದಿ: 40ಕ್ಕೂ ಹೆಚ್ಚು ಪೊಲೀಸರು ಬಂದು ಹೊಡೆದಿದ್ದಕ್ಕೆ ಸುಳ್ಳು ಹೇಳಿದ್ದೇವೆ

You Might Also Like

ಉಗ್ರರ ದಮನಕ್ಕೆ ‘ಅಪರೇಷನ್ ಸಿಂಧೂರ’ ಹೆಸರಿಟ್ಟು ಭಾರತೀಯರನ್ನು ಭಾವನಾತ್ಮಕವಾಗಿಸಿದ ಮೋದಿ

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಬೆನ್ನಲ್ಲೇ ಬಾಲ ಬಿಚ್ಚಿದ ಎಂಇಎಸ್ ಪುಂಡರು, ನಿಷೇಧಾಜ್ಞೆ ಜಾರಿ

ಆರ್ಟಿಕಲ್‌ 370 ರದ್ದತಿ ಬಳಿಕ ಕಾಶ್ಮೀರ ಅಭಿವೃದ್ಧಿಯಾಗಿದೆ ಎಂದ ಕಾಂಗ್ರೆಸ್‌ ನಾಯಕ ಸಲ್ಮಾನ್ ಖುರ್ಷಿದ್

ಅ.24 ರಿಂದ ನ.3ರ ವರೆಗೆ ಹಾಸನಾಂಬ ದರ್ಶನ

ಪಾಕಿಸ್ತಾನಕ್ಕೆ ನಮ್ಮ ಬೆಂಬಲ ಇಲ್ಲ : ಟರ್ಕಿ ಸ್ಪಷ್ಟನೆ

TAGGED:#Chamrajnagar#evm#Villagers
Share This Article
Facebook Copy Link Print
Previous Article bhajarang punia copy bhajarang punia copy bhajarang punia copy ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು
Next Article revanna areest copy revanna areest copy revanna areest copy ರೇವಣ್ಣ ವಿರುದ್ಧ ಕಿಡ್ನ್ಯಾಪ್ ಪ್ರಕರಣ: SIT ಗೆ ಸರಿಯಾಗಿ ಸ್ಪಂದಿಸದ ಸಂತ್ರಸ್ತೆ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

sdggdgdgdg sdggdgdgdg sdggdgdgdg
ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
Entertainment
April 21, 2026
Heatwave - Weather
ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ
ರಾಜ್ಯ-Karnataka
April 21, 2026
John Ternus John Ternus John Ternus
ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
ವಿದೇಶ-International
April 21, 2026
census census census
ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
ರಾಜ್ಯ-Karnataka
April 19, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up