ಬೆಂಗಳೂರು: ಮಹಿಳೆ ಕಿಡ್ನ್ಯಾಪ್ (Kidnap) ಕೇಸ್‌ನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣರನ್ನು (HD. Revanna) ಬಂಧಿಸಿರುವ ಎಸ್ಐಟಿ (SIT) ಅಧಿಕಾರಿಗಳು ತೀವ್ರ ವಿಚಾರಣೆ ಮಾಡಲಾಗುತ್ತಿದೆ.
ನಿನ್ನೆ ರಾತ್ರಿಯಿಂದ ರೇವಣ್ಣಗೆ ಎಸ್‌ಐಟಿ (SIT) ಪ್ರಶ್ನೆಗಳ ಸುರಿಮಳೆ ಸುರಿಸಿದ್ದು, ರೇವಣ್ಣ ಮಾತ್ರ ಯಾವ ಪ್ರಶ್ನೆಗೂ ಸರಿಯಾಗಿ ಉತ್ತರ ನೀಡುತ್ತಿಲ್ಲ ಎಂದು ಹೇಲಾಲಾಗಿದೆ. ಇತ್ತ ಕೇಂದ್ರದಲ್ಲಿ ಸಂತ್ರಸ್ತೆ ಮಹಿಳೆಯನ್ನು (Women) ವಿಚಾರಣೆ ಮಾಡಲಾಗಿದ್ದು, ಆಕೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಅಧಿಕಾರಿಗಳ ಪ್ರಶ್ನೆಗಳಿಗೆ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಗೊಂದಲದ ಹೇಳಿಕೆ ನೀಡುತ್ತಿರುವ ಕಿಡ್ನ್ಯಾಪ್ ಸಂತ್ರಸ್ತೆ
ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಮಹಿಳೆಯನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ನನ್ನ ಕಿಡ್ನ್ಯಾಪ್ ಯಾರು ಮಾಡಿಲ್ಲ ನಾನೇ ಹೋಗಿದ್ದು ಅಂತ ಒಂದು ಭಾರಿ ಹೇಳಿದರೆ, ಇನ್ನೊಂದು ಭಾರಿ ಯಾರೋ ಸ್ಥಳೀಯರು ಬಂದು ಕರೆದುಕೊಂಡು ಹೋಗಿದ್ದಾರೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಸಂತ್ರಸ್ತೆಯ ಉತ್ತರಗಳಿಗೆ ಅಧಿಕಾರಗಳಲ್ಲಿ ಗೊಂದಲ ಮೂಡಿದ್ದು, ಸಂತ್ರಸ್ತೆಗೆ ಅಧಿಕಾರಿಗಳು ರೆಸ್ಟ್ ಕೊಟ್ಟು ತೆರಳಿದ್ದಾರೆ. ಇದನ್ನೂ ಓದಿ: ಇಂಡಿಗನತ್ತ ಇವಿಎಂ ಧ್ವಂಸ ಪ್ರಕರಣ: ಕಾಡು ಸೇರಿದ ಗ್ರಾಮಸ್ಥರನ್ನು ನಾಡಿಗೆ ಕರೆತಂದ ಜಿಲ್ಲಾಡಳಿತ
ಲೈಂಗಿಕ ದೌರ್ಜನ್ಯ, ಕಿಡ್ನ್ಯಾಪ್ ಕೇಸ್‌ನಲ್ಲಿ ಮಹಿಳೆಯ ಹೇಳಿಕೆ ಬಹುಮುಖ್ಯ ಪಾತ್ರ ವಹಿಸಲಿದೆ. ಕಿಡ್ನ್ಯಾಪ್ ಮಾಡಿ ಬೆದರಿಕೆ ಇಟ್ಟಿದ್ದರು ಎಂದು ಸಂತ್ರಸ್ತೆ ಹೇಳಿದರೆ ರೇವಣ್ಣಗೆ ಮತ್ತಷ್ಟು ಗಂಡಾಂತರ ಕಟ್ಟಿಟ್ಟ ಬುತ್ತಿ. ತನ್ನ ಮೇಲೆ ರೇಪ್ ಆಗಿದೆ ಎಂದು ಸಾಕ್ಷ್ಯ ನೀಡಿದರೆ ಸಂಕಷ್ಟ ರೇವಣ್ಣಗೆ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾಗಲಿದೆ. ಇದನ್ನೂ ಓದಿ:ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು
ಹೆಚ್.ಡಿ.ರೇವಣ್ಣಗೆ ನಿನ್ನೆಯಿಂದ ವಿಚಾರಣೆ ಮಾಡಿದ್ದು, ಇಂದು ಕೂಡ ಮತ್ತೆ ವಿಚಾರಣೆ ಮಾಡಿದ್ದಾರೆ. ಎಸ್‌ಐಟಿ ಪ್ರಶ್ನೆಗಳಿಗೆ ರೇವಣ್ಣ ಒಂದೇ ಸಾಲಿನ ಉತ್ತರ ಕೊಡುತ್ತಿದ್ದಾರೆ. ಕಿಡ್ನ್ಯಾಪ್‌ಗೂ ನನಗೂ ಸಂಬಂಧವಿಲ್ಲ, ಯಾರನ್ನೂ ಕಿಡ್ನ್ಯಾಪ್ ಮಾಡಿಲ್ಲ ಎಂದು ಎಸ್‌ಐಟಿ ಅಧಿಕಾರಿಗಳ ಎಲ್ಲಾ ಪ್ರಶ್ನೆಗಳಿಗೆ ಒಂದೇ ಸಾಲಿನ ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದ ಮಡದಿಯನ್ನೇ ಹತ್ಯೆ ; ನಡೆದಿದ್ದೇನು?

