ಬೆಂಗಳೂರು : ಬೆಂಗಳೂರಲ್ಲಿ ಪುಂಡರ ಹಾವಳಿ ಮಿತಿ ಮೀರುತ್ತಿದೆ. ತಮ್ಮ ತಮ್ಮ ಮನೆ ಮುಂದೆ ವಾಹನ ನಿಲ್ಲಿಸಿದ್ದರೂ ಸೇಫ್ ಅಲ್ಲ ಎನ್ನುವ ಸ್ಥಿತಿ ಬೆಂಗಳೂರಿನಲ್ಲಿ ನಿರ್ಮಾಣವಾಗಿದೆ. ಮನೆ ಮುಂದೆ ನಿಂತಿದ್ದ ಕಾರಿಗೆ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ.
ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಪುಂಡರು ಅಟ್ಟಹಾಸ ಮೆರೆದಿರುವ ಘಟನೆ ಫ್ರೇಜರ್ ಟೌನ್‌ನ ಮೂರೇ ರೋಡ್‌ನಲ್ಲಿ ನಡೆದಿದೆ. ಮನೆ ಮುಂದೆ ನಿಂತಿದ್ದ ಕಾರಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಶನಿವಾರ ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರಸ್ತೆಯಲ್ಲಿ ನಡೆದು ಬಂದ ಇಬ್ಬರು ಯುವಕರು ನಿಂತಿದ್ದ ಕಾರಿಗೆ ಡ್ಯಾಮೇಜ್ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗಳಿಗಾಗಿ ಹುಟುಕಾಟ ನಡೆಯುತ್ತಿದೆ.
ಬೆಂಗಳೂರಿನಲ್ಲಿ ಪುಂಡರ ಕುಕೃತ್ಯಕ್ಕೆ ಕೊನೆಯೇ ಇಲ್ಲವೇ..? ಇಂತವರ ಕೃತ್ಯಗಳಿಗೆ ಬ್ರೇಕ್ ಬೀಳೋದು ಯಾವಾಗ? ಎಂದು ಜನ ಪ್ರಶ್ನಿಸುತ್ತಿದ್ದಾರೆ.

