ಭಾರತದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss) ಕಾರ್ಯಕ್ರಮಕ್ಕೆ ನೋಡುಗರ ವರ್ಗ ದೊಡ್ಡದಿದೆ. ಎಲ್ಲಾ ಭಾಷೆಯಲ್ಲೂ ದೊಡ್ಮನೆ ಆಟಕ್ಕೆ ಸ್ಕೋಪ್ ಇದೆ. ಅದರಲ್ಲೂ ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ಟಿವಿ ಮತ್ತು ಒಟಿಟಿಗೆ (Bigg Boss Hindi OTT 3) ಅಪಾರ ಅಭಿಮಾನಿಗಳ ಬಳಗವಿದೆ.
ಇದೀಗ ಈ ಶೋ ಪ್ರೇಕ್ಷಕರಿಗೆ ನಿರಾಸೆಯ ಸುದ್ದಿ ಸಿಕ್ಕಿದೆ. ಈ ಬಾರಿ ದೊಡ್ಮನೆ ಒಟಿಟಿ ಶೋನಲ್ಲಿ ಸಲ್ಮಾನ್ ಖಾನ್ ಬದಲಾಗಿ ಬದಲು ನಿರೂಪಕನಾಗಿ ಅನಿಲ್ ಕಪೂರ್ (Anil Kapoor) ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ಲೋಕಸಭೆ ಚುನಾವಣೆ: ದೇಶದಲ್ಲಿ ಮೋದಿ ಅಲೆ ಇದೆ – ಮತದಾನದ ಬಳಿಕ ಕಂಗನಾ ಪ್ರತಿಕ್ರಿಯೆ

ಈ ಬಾರಿ ದೊಡ್ಮನೆ ಒಟಿಟಿ ಶೋಗೆ ಸಲ್ಮಾನ್ ಖಾನ್ ಬದಲು ನಿರೂಪಕನಾಗಿ ಅನಿಲ್ ಕಪೂರ್ (Anil Kapoor) ಎಂಟ್ರಿ ಕೊಟ್ಟಿದ್ದಾರೆ. ಸ್ಟಾರ್ ನಟ ಸಲ್ಮಾನ್ (Salman Khan) ನಿರೂಪಣೆಯ ಕಾರ್ಯಕ್ರಮಕ್ಕೆ ಮತ್ತೊಬ್ಬ ಸ್ಟಾರ್ ನಟ ನಿರೂಪಣೆಯ ಹೊಣೆ ವಹಿಸಿಕೊಂಡಿದ್ದಾರೆ. ಈಗಾಗಲೇ ಈ ಕಾರ್ಯಕ್ರಮದ ಪ್ರೋಮೋ ಕೂಡ ರಿವೀಲ್ ಆಗಿದ್ದು, ಸಲ್ಮಾನ್ ಖಾನ್ ಬದಲು ಅನಿಲ್ ಎಂಟ್ರಿ ಕೊಟ್ಟಿರುವ ಸುಳಿವು ನೀಡಿದ್ದಾರೆ. ಇದನ್ನೂ ಓದಿ:ಪುಷ್ಪ 2’ಸಿನಿಮಾಗೆ ಠಕ್ಕರ್ ಕೊಡಲು ಕೀರ್ತಿ ಸುರೇಶ್ ಸಜ್ಜು
ಬಿಗ್ ಬಾಸ್ ಒಟಿಟಿ ತಂಡ ಬಿಡುಗಡೆ ಮಾಡಿರುವ ಈ ಪ್ರೋಮೋದಲ್ಲಿ ಅನಿಲ್ ಕಪೂರ್ ಅವರ ಮುಖ ಕಾಣಿಸಿಲ್ಲ. ಆದರೆ ಧ್ವನಿ ಕೇಳಿಸಿದೆ. ಹಾಗಾಗಿ ಇದು ಪಕ್ಕಾ ಅನಿಲ್ ಎಂಬುದು ಖಚಿತವಾಗಿದೆ. ನಟ ಅನಿಲ್ ಮಗಳು ಸೋನಮ್ ಕಪೂರ್ ಅವರು ಪ್ರೋಮೋ ಶೇರ್ ಮಾಡಿ, ಪ್ರತಿಭಾವಂತ, ಪರಿಶ್ರಮಿ ಮತ್ತು ಹ್ಯಾಂಡ್ಸಮ್ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಅಡಿಬರಹ ನೀಡಿ ಹಾಡಿಹೊಗಳಿದ್ದಾರೆ. ಹಾಗಾಗಿ ಶೋನ ನಿರೂಪಕರಾಗಿ ಬಂದಿರೋದು ಅನಿಲ್ ಅವರೇ ಎಂಬುದು ಬಹುತೇಕ ಖಚಿತವಾಗಿದೆ. ಇದನ್ನೂ ಓದಿ: ಸಮಯ ಕೂಡಿ ಬರಲಿ ಎಂದ ರಾಧಿಕಾ ಪಂಡಿತ್ – ಗುಡ್‌ನ್ಯೂಸ್ ನೀಡಲಿದ್ದಾರಾ?

ಮೊದಲ ಬಾರಿಗೆ ಬಿಗ್ ಬಾಸ್ ಕಾರ್ಯಕ್ರಮದ ರೂವಾರಿ ಆಗಿ ಕಾಣಿಸಿಕೊಳ್ಳುತ್ತಿರುವ ಅನಿಲ್ ನಿರೂಪಣೆಯ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಜೊತೆಗೆ ಯಾರೆಲ್ಲಾ ಕಾರ್ಯಕ್ರಮಕ್ಕೆ ಸ್ಪರ್ಧಿಗಳಾಗಿ ಭಾಗವಹಿಸುತ್ತಾರೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲವಿದೆ. ಇದನ್ನೂ ಓದಿ:ಮಂಡ್ಯದ ಗಂಡು ಅಂಬರೀಶ್ ಜನ್ಮ ಜಯಂತಿ: ಕುಟುಂಬ, ಫ್ಯಾನ್ಸ್ ನಿಂದ ಪೂಜೆ

