ರಿಯಲ್ ಲೈಫ್‌ನಲ್ಲಿ ಹೀರೋ ಆದ ನಟಿ ದಿಶಾ ಪಟಾಣಿ ಸಹೋದರಿ
ಅನಾಥವಾಗಿದ್ದ ಪುಟ್ಟ ಕಂದಮ್ಮನ ರಕ್ಷಿಸಿದ ನಟಿ
ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಖುಷ್ಬೂ ಪಟಾನಿ
ಕೆಲವು ಬಾಲಿವುಡ್ ಸೆಲೆಬ್ರಿಟಿಗಳಿಂದ ಸಾಕಷ್ಟು ಬೆಂಬಲ ವ್ಯಕ್ತ
ಬಾಲಿವುಡ್ ನಟಿ ದಿಶಾ ಪಟಾನಿ ಅವರ ಸಹೋದರಿ ಖುಷ್ಬೂ ಪಟಾನಿ, ಮಾಜಿ ಸೇನಾಧಿಕಾರಿ, ಸದಾ ಸುದ್ದಿಯಲ್ಲಿರುತ್ತಾರೆ. ಖುಷ್ಬೂ ಅವರು ತಮ್ಮ ಬರೇಲಿಯಲ್ಲಿರುವ ತನ್ನ ಮನೆಯ ಬಳಿ ಅಸಹಾಯಕ ಸ್ಥಿತಿಯಲ್ಲಿದ್ದ ಹೆಣ್ಣು ಮಗುವನ್ನು ರಕ್ಷಣೆ ಮಾಡಿ ವಿಡಿಯೋ ಹಂಚಿಕೊಂಡಿದ್ದಾರೆ .ಯಾರೋ ಉದ್ದೇಶಪೂರ್ವಕವಾಗಿ ಈ ಹುಡುಗಿಯನ್ನು ಅವರ ಮನೆಯ ಹಿಂದೆ ಬಿಟ್ಟು ಹೋಗಿದ್ದಾರೆ .
ಈ ರೀತಿಯ ವಿಷಯವು ತುಂಬಾ ಗಂಭೀರವಾಗಿದೆ. ವೀಡಿಯೊದಲ್ಲಿ ನಂತರ ಒಬ್ಬ ಪೊಲೀಸ್ ಅಧಿಕಾರಿಯೂ ಸಹ ಹುಡುಗಿಯನ್ನು ಹೆಚ್ಚಿನ ತನಿಖೆಗಾಗಿ ಕರೆದೊಯ್ಯುವುದನ್ನು ಕಾಣಬಹುದು.
ಖುಷ್ಬೂ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ಅಧಿಕಾರಿಗಳನ್ನು ಟ್ಯಾಗ್ ಮಾಡಿ, ದೇಶದಲ್ಲಿರುವ ಇಂತಹ ಮುಗ್ಧ ಬಾಲಕಿಯರ ಸುರಕ್ಷತೆಗಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿನಂತಿಸಿದ್ದಾರೆ. ದಯವಿಟ್ಟು ನಮ್ಮ ದೇಶದಲ್ಲಿ ಹೆಣ್ಣು ಮಗುವನ್ನು ಉಳಿಸಿ! ಎಂದು ಬರೆದುಕೊಂಡಿದ್ದಾರೆ. ವಿ