ಮಡಿಕೇರಿ: ಕುಡಿದ ಮತ್ತಿನಲ್ಲಿ ಕುಡುಕನೋರ್ವ ಬಾರ್ (Bar) ಸಿಬ್ಬಂದಿಗೆ ಬಿಯರ್ ಬಾಟಲಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಕೊಡಗು (Kodagu) ಜಿಲ್ಲೆಯ ಕುಶಾಲನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಸಂತೋಷ್ ಮೃತಪಟ್ಟ ವ್ಯಕ್ತಿ. ನಗರದಲ್ಲಿರುವ ಬಾರ್& ರೆಸ್ಟೋರೆಂಟ್‌ನಲ್ಲಿ ಕೃತ್ಯ ನಡೆದಿದೆ. ಜನತರಾ ಕಲೋನಿಯ ಹರ್ಷ ಎಂಬಾತ ಕಂಠೆಪೂರ್ತಿ ಕುಡಿದಿದ್ದ. ಅಮಲಿನಲ್ಲಿ ಸಂತೋಷ್ ಜೊತೆಗೆ ಕಲಹನಿರತನಾಗಿದ್ದಾನೆ. ಇದನ್ನೂ ಓದಿ: ನೇಹಾ ಹಿರೇಮಠ ಹತ್ಯೆ ಖಂಡಿಸಿ ಧಾರವಾಡ ಬಂದ್

ನಂತರ ಇಬ್ಬರ ನಡುವೆ ಮಾತಿಗೆ ಮಾತು ಬೆಳದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಇದರಿಂದ ಇನಷ್ಟು ಕೋಪಗೊಂಡ ಹರ್ಷ ಬಿಯರ್ ಬಾಟಲಿಯಿಂದ ಸಂತೋಷ್ ತಲೆಗೆ ಮತ್ತು ಕುತ್ತಿಗೆಗೆ ಬಲವಾಗಿ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಸಂತೋಷ್ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಈ ರಾಜ್ಯದಲ್ಲಿ 11 ಬೂತ್‌ಗಳಲ್ಲಿ ಮರು ಮತದಾನ : ಹಾಗಾದರೇ ಎಲ್ಲಿ, ಯಾವ ರಾಜ್ಯ
ಕುಶಾಲನಗರ ಠಾಣಾ ವ್ಯಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಹಷನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಭಾರತ ವಿರೋಧಿ ಮುಯಿಝುಗೆ ಮಾಲ್ಡೀವ್ಸ್ ಚುನಾವಣೆಯಲ್ಲಿ ಭರ್ಜರಿ ಗೆಲುವು