ಶ್ರೀಮತಿ ಕಮಲಮ್ಮ ಮ. ರಾಮಮೂರ್ತಿ ಅವರಿಗೆ ಗೌರವದ ಅಶ್ರುತರ್ಪಣ
ಕನ್ನಡದ ಹೋರಾಟಗಾರ ಮ.ರಾಮ ಮೂರ್ತಿ ಅವರ ಧರ್ಮಪತ್ನಿ
ಸುದೀರ್ಘಕಾಲದಿಂದ ದೈಹಿಕವಾಗಿ ಅಸ್ವಸ್ಥರಾಗಿದ್ದ ಶ್ರೀಮತಿ ಕಮಲಮ್ಮ
ದುರದೃಷ್ಟವಶಾತ್ , ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ
ಕನ್ನಡದ ಹೋರಾಟಗಾರ ಮ. ರಾಮ ಮೂರ್ತಿ ಅವರ ಧರ್ಮಪತ್ನಿ ಶ್ರೀಮತಿ ಕಮಲಮ್ಮ ಅವರು ಸುದೀರ್ಘಕಾಲದಿಂದ ದೈಹಿಕವಾಗಿ ಅಸ್ವಸ್ಥರಾಗಿದ್ದು , ಬೆಂಗಳೂರಿನ ಸೇವಾ ಕ್ಷೇತ್ರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ದುರದೃಷ್ಟವಶಾತ್ , ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ . ಇವರು ಆರ್ಥಿಕ ಸಹಾಯಕ್ಕಾಗಿ ಸರ್ಕಾರದ ಕೈಚಾಚಿದರೂ, ಕೂಡ ಸರ್ಕಾರ ಅಸಹಾಯಕತೆಯ ಕೈಚೆಲ್ಲಿದ್ದು ಮಾತ್ರ ವಿಪರ್ಯಾಸವೇ ಸರಿ .
ಕನ್ನಡ ನಾಡು- ನುಡಿಗಾಗಿ ಸೇವೆ ಸಲ್ಲಿಸಿ, ಕನ್ನಡದ ಬಾವುಟವನ್ನು ಕನ್ನಡ ತಾಯಿಯ ಸಿರಿಮುಡಿಗೆ ಸಮರ್ಪಿಸಿದ ಈ ಅಪ್ರತಿಮ ಮಹಾನುಭಾವ ಮ. ರಾಮೂರ್ತಿಯವರ ಧರ್ಮಪತ್ನಿಯವರಿಗೆ ಪ್ರತಿಯೊಬ್ಬ ಕನ್ನಡಿಗ ಒಂದೊಂದು ರೂಪಾಯಿ ಕೊಟ್ಟಿದ್ದರೂ 6 ಕೋಟಿಗೂ ಹೆಚ್ಚು ಹಣ ಸಂಗ್ರಹವಾಗುತ್ತಿತ್ತು.
ಆದರೆ ಕನ್ನಡಿಗರ ನಿಸ್ಸೀಮ ನಿರ್ಲಕ್ಷ್ಯದಿಂದಾಗಿ ಇದು ಆಗಲೇ ಇಲ್ಲ. ಹಳದಿ ಕೆಂಪಿನ ಬಾವುಟ ಇಡೀ ರಾಜ್ಯದಲ್ಲಿ ಇಂದು ಜಗಮಗಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಆದರೆ ಅದನ್ನು ಯೋಚಿಸಿ ಯೋಜಿಸಿ ಕನ್ನಡಿಗರಿಗೆ ಅಧಿಕೃತ ಲಾಂಛನವಾಗಿ ಮಾಡಿದ ಮಹಾನುಭಾವರನ್ನು ಮತ್ತು ಅವರ ಕುಟುಂಬವನ್ನು ನಿರ್ಲಕ್ಷಿಸಿರುವುದು ನಮ್ಮ ಸ್ವಾಭಿಮಾನ ಶೂನ್ಯತೆಗೆ ಹಿಡಿದ ಕನ್ನಡಿಯೇ ಹೌದು . ಮೇ 24ರಂದು ನಡೆದ ಕರ್ನಾಟಕ ಪತ್ರಕರ್ತರ ಧ್ವನಿ ಮೂರನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಹೊರ ತಂದ ‘ಲಕ್ಷ್ಮಣ ದರ್ಪಣ’ ಅಭಿನಂದನ ಗ್ರಂಥವನ್ನು ಕಮಲಮ್ಮನವರಿಗೆ ಸಮರ್ಪಣೆ ಮಾಡಲಾಗಿತ್ತು.

