ರಾಯಚೂರು: ಎನ್‌ಅರ್‌ಬಿಸಿ ಕಾಲುವೆಗೆ ಬಿದ್ದು ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಜೆಲ್ಲೆಯ ಲಿಂಗಸೂರು (Lingasuru) ತಾಲೂಕಿನ ಬೆಂಡೋಣಿ ಗ್ರಾಮದಲ್ಲಿ ನಡೆದಿದೆ.
ಲಕ್ಕಣ್ಣ (22) ಹಾಗೂ ಬಸವಂತ (25) ಮೃತ ಯುವಕರು. ಊರ ಜಾತ್ರೆ ಮನೆಯಲ್ಲಿನ ಬಟ್ಟೆ ಹಾಸಿಗೆ ತೊಳೆಯಲು ಪಾಲಕರೊಂದಿಗೆ ಕಾಲುವೆಗೆ ಹೋದಾಗ ಘಟನೆ ನಡೆದಿದೆ. ಬಟ್ಟೆ ತೊಳೆಯೋ ಮೊದಲು ಓರ್ವ ಯುವಕ ಜಾರಿ ನೀರಿಗೆ ಬಿದಿದ್ದ. ಅವನನ್ನು ಕಾಒಆಡಲು ಮತ್ತೋರ್ವ ಯುವಕ ನೀರಿಗೆ ಧುಮುಕಿದ್ದ. ಆದರೆ ಇಬ್ಬರಿಗೂ ಈಜು ಬಾರದ ಕಾಲುವೆಯಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ವಿಚಾರಣೆಗೆ ಹಾಜರಾಗಲು 7 ದಿನ ಅವಕಾಶ ನೀಡುವಂತೆ ಪ್ರಜ್ವಲ್ ರೇವಣ್ಣ ಮನವಿ
ಅಲ್ಲಿದ್ದ ಸ್ಥಳೀಯರು ರಕ್ಷಣೇ ಮಾಡಲು ಪ್ರಯತ್ನ ಪಟ್ಟರೂ ಯಶ್ವಸಿಯಾಗಿಲ್ಲ. ಬಳಿಕ ಯುವಕರ ಶವಗಳನ್ನು ಸ್ಥಿಳೀಯರು ಹೊರತೆಗೆದಿದ್ದಾರೆ. ಈ ಕುರಿತು ಲಿಂಗಸುಗೂರು ಪೊಲೀಶ್ ಠಾಣೆಯಲ್ಲಿ ಪ್ರಕರನ ದಾಖಲಾಗಿದೆ. ಇದನ್ನೂ ಓದಿ: ಬಿರು ಬಿಸಿಲ ಎಫೆಕ್ಟ್; ತತ್ತರಿಸಿದ ಬೇಸಿಗೆ ಹಂಗಾಮಿನ ಬೆಳೆ

