ಬೆಳಗಾವಿ : ಶಾಲೆಯಲ್ಲಿ ಮಕ್ಕಳ ಗಲಾಟೆ ಹಿನ್ನೆಲೆಯಲ್ಲಿ ಪೋಷಕರು ಮಾರಾಮಾರಿ ನಡೆಸಿದ ಘಟನೆ ಬೆಳಗಾವಿ ನ್ಯಾಯಾಲಯದ ಸಮೀಪ ಸೋಮವಾರ ನಡೆದಿದೆ. ನ್ಯಾಯಾಲಯದಲ್ಲಿ ಮೊಕದ್ದಮೆ ಇದ್ದ ಹಿನ್ನೆಲೆಯಲ್ಲಿ ನ್ಯಾಯಲಯಕ್ಕೆ ಹಾಜರಾಗಿದ್ದ ವೇಳೆ ಏಕಾಏಕಿ ಇಬ್ಬರ ತಂಡ ಹಲ್ಲೆ ಮಾಡಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಶಾಲೆಯಲ್ಲಿ ಮಕ್ಕಳು ಗಲಾಟೆಯಾಗಿದೆ. ಸೋಯಲ್ ಇನಾಮದಾರ ಸೇರಿಕೊಂಡು ಜಹೀರ್ ಅಬ್ಬಾಸ್ ಹುಕ್ಕೇರಿ ಮೇಲೆ ಕಲ್ಲು, ಇಟ್ಟಂಗಿಲೇ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಜಹೀರನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವರದಿ. ದಯಾನಂದ ಎಂ.

