ಬೆಂಗಳೂರು : RSSಗೆ ಕಡಿವಾಣ ಹಾಕುವ ವಿಚಾರದ ಬಗ್ಗೆ ಪ್ರಿಯಾಂಕ್ ಖರ್ಗೆ ಪತ್ರದ ಬಗ್ಗೆ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯಿಸಿದ್ದು, ದೇಶದಲ್ಲಿ ಆರ್ ಎಸ್ ಎಸ್ ಸಂಘಟನೆ ಒಂದೇನಾ ಇರೋದು..? ಯಾವುದೇ ಕಾರ್ಯಕ್ರಮ ಇರಲಿ ಅದಕ್ಕೆ ಪರವಾನಗಿ ಪಡೆಯಬೇಕು ಎನ್ನುವ ಕಾನೂನು ಇದೆ ಎಂದರು.
ಈ ಬಗ್ಗೆ ಮಾತನಾಡಿದ ಅವರು, ಎಲ್ಲರೂ ಕೂಡ ಅದನ್ನು ಪಾಲಿಸಬೇಕು, ಯಾವುದೇ ಕಾರ್ಯಕ್ರಮ ಇರಲಿ ಅದಕ್ಕೆ ಪರವಾನಗಿ ಪಡೆಯಬೇಕು ಎನ್ನುವ ಕಾನೂನು ಇದೆ, ಸರ್ಕಾರ ಮಾಡಿದ್ದ ಹಳೆ ಕಾನೂನು ಅದು ದೇಶದಲ್ಲಿ ಆರ್ ಎಸ್ ಎಸ್ ಸಂಘಟನೆ ಒಂದೇನಾ ಇರೋದು..? ಎಂದು ಪ್ರಶ್ನಿಸಿದರು.
RSS ರಿಜಿಸ್ಟ್ರಾರ್ ಆಗದ ಸಂಘ, ಹೀಗಾಗಿ ಪ್ರಿಯಾಂಕ ಖರ್ಗೆ ಹೇಳ್ತಿರೋದು ಸತ್ಯ ಇದೆ. ರಿಜಿಸ್ಟರ್ ಆಗದ ಸಂಘವೊಂದು ದೊಡ್ಡ ಬಂಗ್ಲೆ ಎಲ್ಲಾ ಕಟ್ಟಿದ್ದಾರೆ, 2ಸಾವಿರ ಕೋಟಿ ಪ್ರಾಪರ್ಟಿ ಮಾಡಿದ್ದಾರೆ. ಹೀಗೆ ರಿಜಿಸ್ಟ್ರೇಶನ್ ಇಲ್ಲದೆ ಕಾಂಗ್ರೆಸ್ ಮಾಡಿದ್ರೆ ಸುಮ್ಮನೆ ಇರುತ್ತಿದ್ರಾ ಎಂದು ಎಂಬಿ ಪಾಟೀಲ್ ಕಿಡಿ ಕಾರಿದರು.
ಯಾವುದೇ ರಿಜಿಸ್ಟರ್ ಮಾಡದೆ ಇಷ್ಟೊಂದು ಹಣ, ಬಂಗ್ಲೆ ಕಾಂಗ್ರೆಸ್ ಕಟ್ಟಿದ್ದರೆ ಸುನಾಮಿ, ಭೂಕಂಪ ಸೃಷ್ಟಿಸುತ್ತಿದ್ದರು. RSS ಸ್ವಾತಂತ್ರ್ಯ ಹೋರಾಟದಲ್ಲಿ ಯಾಕೆ ಪಾಲ್ಗೊಳ್ಳಲಿಲ್ಲ.. ಆಗ ಯಾಕೆ ಬ್ರಿಟಿಷರ ಜೊತೆ ಕೈಜೋಡಿಸಿತ್ತು. ಎಂದು ಎಂ ಬಿ ಪಾಟೀಲ್ ಪ್ರಶ್ನಿಸಿದ್ದಾರೆ.
ಕನ್ನೇರಿ ಶ್ರೀಗಳು ಸುಮ್ಮನೆ ಕ್ಷಮೆ ಕೇಳಿ ಬಗೆಹರಿಸುವುದನ್ನು ಬಿಟ್ಟು, ಭಂಡತನ ಮಾಡುತ್ತಿದ್ದಾರೆ. ಸುಮ್ಮನೆ ಪೌರುಷ ಹೇಳಿಕೊಳ್ಳಲು ಮಾಡಿದ್ದು ಇದೆಲ್ಲ. ಅವರು ಮಾತನಾಡಿದ ಶಬ್ದಗಳು ನಿಜಕ್ಕೂ ಖಂಡನೀಯ ಆಡು ಭಾಷೆಯಲ್ಲಿ ಅಂತಾರೆ, ನನಗೂ ಆಡು ಭಾಷೆಯಲ್ಲಿ ಅನೇಕ ಶಬ್ದಗಳು ಬರ್ತಾವೆ ಎಂದು ಅದೇ ನಾನು ಮಾತನಾಡಿದ್ರೆ ಏನಾಗುತ್ತೆ ಯೋಚಿಸಬೇಕು ಎಂದು ಹೇಳಿದರು.
ಶ್ರೀಗಳ ಜಿಲ್ಲಾ ನಿರ್ಬಂಧದ ಹಿಂದೆ ನಾನಿಲ್ಲ. ಇದು ಜಿಲ್ಲಾಡಳಿದ ಕೆಲಸ, ನಿರ್ಬಂಧವನ್ನು ಜಿಲ್ಲಾಧಿಕಾರಿಗಳು, ಎಸ್ಪಿ ಈ ಬಗ್ಗೆ ನಿರ್ಧಾರ ತಗೆದುಕೊಂಡಿದ್ದಾರೆ. ನಿರ್ಬಂಧ ಹೇರದೆ ಏನಾದ್ರೂ ಅನಾಹುತ ಆಗಿದ್ರೆ ನೀವೇ ಜಿಲ್ಲಾಡಳಿತವನ್ನು ಪ್ರಶ್ನಿಸುತ್ತೀರಿ. ಒಂದು ವೇಳೆ ಶ್ರೀಗಳು ಕ್ಷಮೆ ಕೇಳಿದ್ರೆ ದೊಡ್ಡವರಾಗುತ್ತಿದ್ದರು ಎಂದ ಎಂಬಿ ಪಾಟೀಲ್ ತಿಳಿಸಿದ್ದಾರೆ.

