ಬೆಂಗಳೂರು : ಸಿಲಿಕಾನ್ ಸಿಟಿಯ ಹೃದಯಾ ಭಾಗದಲ್ಲೇ ಪ್ರಮುಖ ರಸ್ತೆಗಳು ಒಂದು ತಿಂಗಳು ಕ್ಲೋಸ್ ಆಗಲಿವೆ. ಚಿಕ್ಕಪೇಟೆ ಸುತ್ತಮುತ್ತಲಿನ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯಲಿದ್ದು ಬಿಬಿಎಂಪಿ ಕಾಮಗಾರಿಗಾಗಿ ಒಂದು ತಿಂಗಳು ರಸ್ತೆ ಬಂದ್ ಮಾಡಲಿದೆ.
ಅವೆನ್ಯೂ ರಸ್ತೆ, ಅಕ್ಕಿ ಪೇಟೆ, ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಈಗಾಗಲೇ ಕಾಮಗಾರಿ ಆರಂಭವಾಗಿದ್ದು ಇದರಿಂದ ನಗರದಲ್ಲಿ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಲಿದೆ. ಮಾರ್ಕೆಟಿಂಗ್ ಹಬ್ ಆಗಿರುವ ರಸ್ತೆಗಳಲ್ಲಿ ಏಕ ಕಾಲಕ್ಕೆ ವೈಟ್ ಟಾಪಿಂಗ್ ಆರಂಭಿಸಿರುವುದರಿಂದ ಬದಲಿ ಮಾರ್ಗ ಬಳಸುವಂತೆ ವಾಹನ ಸವಾರರಿಗೆ ಪಾಲಿಕೆ ಟ್ರಾಫಿಕ್ ಪೋಲಿಸರ ಸೂಚನೆ ನೀಡಿದ್ದಾರೆ.
ಕಿರಿದಾಗ ರಸ್ತೆಗಳನ್ನು ಸರಿಪಡಿಸಲು ಏಕ ಕಾಲಕ್ಕೆ ಕಾಮಗಾರಿ ಆರಂಭಿಸಿರುವ ಪಾಲಿಕೆ ಒಂದು ತಿಂಗಳೊಳಗೆ ಕಾಮಗಾರಿ ಪೂರ್ತಿ ಗೊಳಿಸುವ ಭರವಸೆ ನೀಡಿದೆ. ಯಾವ ಯಾವ ರಸ್ತೆಗಳಲ್ಲಿ ಸಂಚಾರ ನಿರ್ಭಂದ ವಿಧಿಸಲಾಗಿದೆ ಎಂಬುದರ ಮಾಹಿತಿ ಈ ಕೆಳಕಂಡಂತಿದೆ.
- ಕಬ್ಬನ್ ಪೇಟೆ ಮುಖ್ಯ ರಸ್ತೆಯಲ್ಲಿ
ಅವೆನ್ಯೂ ರಸ್ತೆಯಿಂದ ಸಿದ್ದಣ್ಣಗಲ್ಲಿ - ಬನ್ನಪ್ಪಪಾರ್ಕ್ ರಸ್ತೆಯಲ್ಲಿ ಅವೆನ್ಯೂ ರಸ್ತೆಯಿಂದ 15ನೇ ಕ್ರಾಸ್..
- ವಿಲ್ ರಸ್ತೆಯಲ್ಲಿ ಡಾ.ಟಿಸಿಎಂ ರಾಯನ್ ರಸ್ತೆ ಜಂಕ್ಷನ್‌ನಿಂದ ಅಕ್ಕಿಪೇಟೆ ಮುಖ್ಯರಸ್ತೆ
- ಆರ್.ಟಿ.ಸ್ಟ್ರೀಟ್ ನಲ್ಲಿ ಬಿವಿಕೆ ಐಯ್ಯಂಗಾರ್ ರಸ್ತೆಯಿಂದ ಅವೆನ್ಯೂ ರಸ್ತೆ
- ಆರ್.ಟಿ.ಸ್ಟ್ರೀಟ್‌ನಲ್ಲಿ ಬಿವಿಕೆ ಐಯ್ಯಂಗಾರ್ ರಸ್ತೆಯಿಂದ ಬಳೆಪೇಟೆ ಮುಖ್ಯರಸ್ತೆ
- ಸಿಟಿ ಸ್ಟ್ರೀಟ್‌ನಲ್ಲಿ ದೇವರದಾಸಿಮಯ್ಯ ರಸ್ತೆಯಿಂದ ನಗರ್ತ ಪೇಟೆ ಮುಖ್ಯ ರಸ್ತೆ