ಬೆಂಗಳೂರು: ಮತದಾನಕ್ಕೆ (Election) ಇನ್ನೇನು ಮೂರು ದಿನ ಬಾಕಿ ಇದೆ. ಈ ವೇಳೆ ಚುನಾವಣಾಧಿಕಾರಿಗಳಿಂದ ಅಂತಿಮ ಹಂತದ ಸಿದ್ದತೆಯ ಸಭೆ ಇಂದು ನಡೆಸಿದ್ದು, ಸಭೆಯಲ್ಲಿ ಮತದಾನದ ಪೂರ್ವ ದಿನ ಹೇಗೆಲ್ಲ ತಯಾರಿ ಆಗಬೇಕು ಅಂತಾ ಸಿದ್ದತೆ ಬಗ್ಗೆ ಚರ್ಚೆ ನಡೆಸಲಾಗಿದೆ.
ಸಭೆಯ ಬಳಿಕ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ (Tushar Girinath) ಹಾಗೂ ಪೊಲೀಸ್ ಆಯುಕ್ತ ದಯಾನಂದ್ (Dayanad) ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಿಲಿಕಾನ್ ಸಿಟಿಯಲ್ಲಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್ ಹಾಗೂ ಬೆಂಗಳೂರು ಗ್ರಾಮಾಂತರ ಹೀಗೆ ಒಟ್ಟು 5 ಲೋಕಸಭಾ ಕ್ಷೇತ್ರಗಳಿವೆ. ಜೊತೆಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬೆಂಗಳೂರಿನ ಕೆಲ ಏರಿಯಾಗಳು ಸೇರ್ಪಡೆಗೊಂಡಿವೆ ಎಂದರು. ಇದನ್ನೂ ಓದಿ:ಹುನಮ ಪುಜೆಗೆಂದು ನದಿಗೆ ನೀರು ತರಲು ಹೋದವರು ಹೆಣವಾಗಿ ವಾಪಸ್ಸ್
ಬಂದೋಬಸ್ತ್: ಬೆಂಗಳೂರು ನಗರ ಪೊಲೀಸ್ ಘಟಕದಿಂದ 9397 ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. 3,919 ಗೃಹ ರಕ್ಷಕ ಸಿಬ್ಬಂದಿ, 54 ಸಶಸ್ತ್ರ ತುಕಡಿ ಹಾಗೂ 11 ಕೇಂದ್ರಿಯ ಪೊಲೀಸ್ ತುಕಡಿ ಇದೆ. ಇವತ್ತಿಂದ ಮತದಾನಕ್ಕೆ 72 ಗಂಟೆ ಇದೆ. ಮತದಾನ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಗೆ ಕ್ಲೋಸ್ ಆಗಲಿದೆ. ಈ ಸಮಯದಲ್ಲಿ ಹಣ ಹಂಚಿಕೆ ಆಗಲಿ, ಆಮಿಷ ಮಾಡೋದು ನಡೆಯಬಾರದು. ಮತದಾರರ ಮೇಲೆ ಪ್ರಭಾವ ಬೀರುವ ಚಟುವಟಿಕೆ ಮೇಲೆ ನಿಗಾ ವಹಿಸಲಾಗಿದೆ. ಇವತ್ತಿನ ಸಭೆಯಲ್ಲಿ ಕೋಡ್ ಆಫ್ ಕಂಡೆಕ್ಟ್ ಸ್ಟ್ರಾಟಜಿ ಬಗ್ಗೆ ಮಾತಾಡಿರುವುದಾಗಿ ತಿಳಿಸಿದ ಅವರು, ಈ ಮೂರು ದಿನದಲ್ಲಿ ಹೆಚ್ಚು ನಿಗಾ ವಹಿಸಬೇಕು ಅಂತ ಎಫ್ ಎಸ್ ಟಿ ಗೆ ತಿಳಿಸಿದ್ದೇವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹೇಳಿದರು. ಇದನ್ನೂ ಓದಿ: ತಂದೆಯ ಕಾರು ಹರಿದು ಮಗು ದುರ್ಮರಣ
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 8,984 ಮತಗಟ್ಟೆಗಳಿವೆ. ಇದರಲ್ಲಿ 2003 ಕ್ರಿಟಿಕಲ್ ಮತಗಟ್ಟೆ ಗಳು, 253 ವಲ್ನರಬಲ್ ಮತಗಟ್ಟೆಗಳು, 30 ಎಕ್ಸ್ ಪೆಂಡೀಚರ್ ಸೆನ್ಸಿಟಿವ್ ಮತಗಟ್ಟೆಗಳು, 305 ಮೈಕ್ರೋ ಅಬ್ಸವರ್ಸಗಳಿವೆ. ಸೂಕ್ಷ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ 11794 ಸಿಎಪಿಎಫ್ ಮತ್ತು ನಾನ್ ಸಿಎಪಿಎಫ್ ತಂಡಗಳ ನಿಯೋಜನೆ ಮಾಡಲಾಗುತ್ತದೆ. 103 ಚೆಕ್ ಪೋಸ್ಟ್ ಗಳು, 91 ಪ್ಲೇಯಿಂಗ್ ಸ್ಕ್ವಾಡ್ ಗಳು ಇರಲಿವೆ. ಇನ್ನು 5,117 ರೌಡಿಶೀಟರ್ ಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುವುದು. 7,533 ಪರವಾನಿಗೆ ಇರುವ ಶಸ್ತ್ರಾಸ್ತ್ರಗಳನ್ನು ಜಮಾ ಮಾಡಲಾಗಿದೆ. ಏ. 24 ಸಂಜೆ ಆರು ಗಂಟೆಯಿಂದ ಏ. 26 ರಾತ್ರಿ 12 ಗಂಟೆ ತನಕ ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವುದಾಗಿ ಹೇಳಿದರು. ಇದನ್ನೂ ಓದಿ: ಕುಟುಂಬದವರೇ ಮದುವೆ ಮಂಟಪಕ್ಕೆ ನುಗ್ಗಿ ವಧೂವನ್ನು ಎಳೆದೊಯ್ಯಲು ಯತ್ನ

ಮದ್ಯ ನಿಷೇಧ: ಕರ್ನಾಟಕದಲ್ಲಿ ಮೊದಲನೇ ಹಂತದ ಲೋಕಸಭಾ ಚುನಾವಣೆಯ ಹಿನ್ನೆಲೆ ಬೆಂಗಳೂರಿನ ಒಟ್ಟು ಐದು ಲೋಕಸಭಾ ಕ್ಷೇತ್ರಗಳಿದ್ದು, 8088 ಒಟ್ಟು ಮತಗಟ್ಟೆಗಳಿವೆ. ಇದರಲ್ಲಿ 6,351 ಸಾಮಾನ್ಯ ಮತಗಟ್ಟೆಗಳಿದ್ದು, 1,737 ಸೂಕ್ಷ್ಮ ಮತಗಟ್ಟೆಗಳಿವೆ. ಮತದಾನ ಮುಗಿಯುವ ಅವಧಿಯ ಹಿಂದಿನ 48 ಗಂಟೆಗಳ ಕಾಲ ಮದ್ಯ ನಿಷೇಧ ಮಾಡಲಾಗುತ್ತದೆ. ಮಾದಕ ವಸ್ತುಗಳ ಮಾರಾಟ ಮಾಡುವಂತಿಲ್ಲ. ಮದ್ಯ ಮಾರಾಟ ಮಾಡದಿರಲು ನಿಷೇಧಾಜ್ಞೆ ಜಾರಿಗೆ ತರಲಾಗುತ್ತದೆ ಎಂದರು. ಇದನ್ನೂ ಓದಿ: 24 ಗಂಟೆಯೊಳಗೆ ತೈವಾನ್ನಲ್ಲಿ 80 ಕ್ಕೂ ಹೆಚ್ಚು ಬಾರಿ ಕಂಪಿಸಿದ ಭೂಮಿ
ಬೆಂಗಳೂರಿನಲ್ಲಿ 1.10 ಕೋಟಿಗೂ ಹೆಚ್ಚು ಮತದಾರರು ಇದ್ದಾರೆ. 31 ಸಾವಿರ ವಿಶೇಷ ಚೇತನರು, 1,685 ಸೇವಾ ಮತದಾರರು, 1,60,232 ಒಟ್ಟು ಯುವ ಮತದಾರರು, 2,158 ಎನ್ ಆರ್ ಐ ಮತದಾರರು ಇದ್ದಾರೆ. ಇನ್ನು 105 ಚೆಕ್ ಪೋಸ್ಟ್, 28 ಮಸ್ಟರಿಂಗ್ ಕೇಂದ್ರಗಳಿವೆ ಎಂದು ತಿಳಿಸಿದರು. ಸಭೆಯಲ್ಲಿ ಮಸ್ಟರಿಂಗ್ ಅಧಿಕಾರಿಗಳು, ಮತಗಟ್ಟೆ ಅಧಿಕಾರಿಗಳು, ಎಂಸಿಸಿ ನೋಡಲ್ ಆಫೀಸರ್ ಗಳು ಮತ್ತು ಬೆಂಗಳೂರು ನಾಲ್ಕು ಲೋಕಸಭಾ ಕ್ಷೇತ್ರಗಳ ಆರ್ ಓಗಳು ಮತ್ತು ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಬೆಂಗಳೂರು, ಚಿತ್ರದುರ್ಗದಲ್ಲಿ ಪ್ರಚಾರದ ಅಖಾಡಕ್ಕೆ ಇಂದು ಪ್ರಿಯಾಂಕಾ ಗಾಂಧಿ ಎಂಟ್ರಿ